Thursday, June 4, 2026
Homeಕರಾವಳಿಬಂಟ್ವಾಳ; ಎರಡು ಕಾರುಗಳ ಮಧ್ಯೆ ಅಪಘಾತವಾಗಿ ಇಬ್ಬರಿಗೆ ಗಾಯ

ಬಂಟ್ವಾಳ; ಎರಡು ಕಾರುಗಳ ಮಧ್ಯೆ ಅಪಘಾತವಾಗಿ ಇಬ್ಬರಿಗೆ ಗಾಯ

- Advertisement -
- Advertisement -

ಬಂಟ್ವಾಳ; ಎರಡು ಕಾರುಗಳ ಮಧ್ಯೆ ಅಪಘಾತವಾಗಿ ಇಬ್ಬರಿಗೆ ಗಾಯಗಳಾಗಿರುವ ಘಟನೆ ಬಂಟ್ವಾಳ ಟ್ರಾಫಿಕ್ ಪೋಲೀಸ್ ಠಾಣಾ ವ್ಯಾಪ್ತಿಯ ಬೇಂಕ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಮೀಪ ನಡೆದಿದೆ.

ಅಪಘಾತದಲ್ಲಿ ಕಾರು ಚಾಲಕರಾದ ಆದರ್ಶ ಮತ್ತು ಸಂಕಪ್ಪ ಅವರು ಗಾಯಗೊಂಡಿದ್ದಾರೆ.ಸಜೀಪ ಮೂಡ ಗ್ರಾಮದ ಬೇಂಕ್ಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಸಮೀಪದಲ್ಲಿ ಎರಡು ಕಾರುಗಳ ನಡುವೆ ಮುಖಾಮುಖಿ ‌ಡಿಕ್ಕಿಯಾಗಿದೆ.

ಮುಡಿಪು ಕಡೆಯಿಂದ ಮತ್ತು ಮೆಲ್ಕಾರ್ ಕಡೆಯಿಂದ ಬರುತ್ತಿದ್ದ ಕಾರುಗಳ ಮಧ್ಯೆ ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಎರಡು ಕಾರುಗಳು ಜಖಂಗೊಂಡಿದೆ . ಆದರೆ ಎರಡು ಕಾರಿನಲ್ಲಿ ಕಾರು ಚಾಲಕರು ಮಾತ್ರ ಇದ್ದು , ಅದೃಷ್ಟವಶಾತ್ ಇಬ್ಬರಿಗೂ ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೆಲ್ಕಾರ್ ಟ್ರಾಫಿಕ್ ಪೋಲೀಸರು ಸ್ಥಳಕ್ಕೆ ‌ಬೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!