Saturday, June 27, 2026
Homeಕರಾವಳಿಉಡುಪಿಕಾರ್ಕಳ: ಇನ್ನೋವಾ ಕಾರು-ಸ್ಕೂಟರ್‌ ನಡುವೆ ಅಪಘಾತ: ಅಣ್ಣ ತಮ್ಮಂದಿರಿಬ್ಬರು ಸಾವು

ಕಾರ್ಕಳ: ಇನ್ನೋವಾ ಕಾರು-ಸ್ಕೂಟರ್‌ ನಡುವೆ ಅಪಘಾತ: ಅಣ್ಣ ತಮ್ಮಂದಿರಿಬ್ಬರು ಸಾವು

- Advertisement -
- Advertisement -

ಕಾರ್ಕಳ;  ಕಾರು-ಸ್ಕೂಟರ್‌ ನಡುವೆ ಅಫಘಾತ ಸಂಭವಿಸಿ ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ನಂದಳಿಕೆ ಮಾವಿನಕಟ್ಟೆಯ ಬಳಿ ನಡೆದಿದೆ.

ನಂದಳಿಕೆಯ ನಿವಾಸಿಗಳಾದ ಸತೀಶ್ ಕುಲಾಲ್(28) ಹಾಗೂ ಸಂದೀಪ್ ಕುಲಾಲ್ ಮೃತ ದುರ್ದೈವಿಗಳು.

ಕಾರ್ಕಳ ಕಡೆಯಿಂದ ಬೆಳ್ಮಣ್ ಕಡೆಗೆ ಸ್ಕೂಟಿಯಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಕಾರ್ಕಳ ಕಡೆಗೆ ಪ್ರಯಾಣಿಸುತ್ತಿದ್ದ ಇನ್ನೋವಾ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸಂದೀಪ್ ಸ್ಥಳದಲ್ಲಿಯೇ ಮೃತ ಪಟ್ಟರೆ, ಸತೀಶ್ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ.

ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!