- Advertisement -
- Advertisement -
ಬಂಟ್ವಾಳ: ಜಕ್ರಿಬೆಟ್ಟು ಎಂಬಲ್ಲಿ ಲಾರಿ ಮತ್ತು ರಿಕ್ಷಾ ನಡುವೆ ಅಪಘಾತ ನಡೆದಿದ್ದು, ಅಪಘಾತದಲ್ಲಿ ರಿಕ್ಷಾ ಚಾಲಕ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ವ್ಯಕ್ತಿ ಪೊಳಲಿ ಬೆಳಂದೂರು ನಿವಾಸಿ ರಿಕ್ಷಾ ಚಾಲಕ ಚೇತನ್.
ಘಟನೆಯ ವಿವರ: ರಿಕ್ಷಾ ಚಾಲಕ ಚೇತನ್ ಬಡ್ಡಕಟ್ಟೆಯಿಂದ ಜಕ್ರಿಬೆಟ್ಟು ಕಡೆಗೆ ಹೋಗುತ್ತಿದ್ದ ಸಂದರ್ಭ ಬಂಟ್ವಾಳ ಜಕ್ರಿಬೆಟ್ಟು ಪಂಪ್ ಹೌಸ್ ಮುಂದೆ ಬಂಟ್ವಾಳ ಪೇಟೆಯಿಂದ ಹೆದ್ದಾರಿಗೆ ಕ್ರಾಸ್ ಮಾಡುವ ವೇಳೆ ಬೆಳ್ತಂಗಡಿ ಕಡೆಯಿಂದ ಮರದ ದಿಮ್ಮಿಗಳನ್ನು ಹೇರಿಕೊಂಡು ಬರುತ್ತಿದ್ದ ಲಾರಿಗೆ ಡಿಕ್ಕಿಯಾಗಿದೆ. ರಿಕ್ಷಾ ಡಿಕ್ಕಿಯಾದ ರಭಸಕ್ಕೆ ಸಂಪೂರ್ಣ ಜಖಂ ಗೊಂಡಿದೆ. ಚಾಲಕ ಚೇತನ್ ಅವರ ಕಾಲಿಗೆ ಸ್ವಲ್ಪ ಗಾಯವಾಗಿದ್ದು, ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಪೋಲೀಸರು ಭೇಟಿ ನೀಡಿ ಪರಿಶೀಲಿಸಿದರು.
- Advertisement -