Saturday, June 6, 2026
Homeಕರಾವಳಿಮಂಗಳೂರು; ಬಸ್ ಹಾಗೂ ಆಂಬ್ಯುಲೆನ್ಸ್ ಮಧ್ಯೆ ಅಪಘಾತ, ರೋಗಿ ಸಹಿತ ನಾಲ್ವರಿಗೆ ಗಾಯ

ಮಂಗಳೂರು; ಬಸ್ ಹಾಗೂ ಆಂಬ್ಯುಲೆನ್ಸ್ ಮಧ್ಯೆ ಅಪಘಾತ, ರೋಗಿ ಸಹಿತ ನಾಲ್ವರಿಗೆ ಗಾಯ

- Advertisement -
- Advertisement -

ಮಂಗಳೂರು: ಬಸ್ ಹಾಗೂ ಆಂಬ್ಯುಲೆನ್ಸ್ ಮಧ್ಯೆ ಅಪಘಾತ ಸಂಭವಿಸಿ ರೋಗಿ ಸಹಿತ ನಾಲ್ವರಿಗೆ ಗಾಯಗಳಾಗಿರುವ ಘಟನೆ ಮಂಗಳೂರಿನ ಕುಲಶೇಖರ ಬಳಿ ನಡೆದಿದೆ. ಅಪಘಾತದಲ್ಲಿ ಆಂಬ್ಯುಲೆನ್ಸ್ ಚಾಲಕ,  ರೋಗಿ ಸಹಿತ ನಾಲ್ಕು ಮಂದಿ ಗಾಯಗೊಂಡಿದ್ದಾರೆ.

ಮೂಡಬಿದರೆ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಆಂಬ್ಯುಲೆನ್ಸ್ ಮತ್ತು ಮಂಗಳೂರಿನಿಂದ ಮೂಡಬಿದಿರೆ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮಧ್ಯೆ ಢಿಕ್ಕಿ ಸಂಭವಿಸಿದೆ ಎನ್ನಲಾಗಿದೆ.

ಇದರಿಂದ ಆಂಬ್ಯುಲೆನ್ಸ್ ಚಾಲಕ ಮಿಯಾರಿನ ರಾಜೇಶ್‌ರ ಕೈಗೆ ಮತ್ತು ಆಂಬ್ಯುಲೆನ್ಸ್ ನಲ್ಲಿದ್ದ ರೋಗಿ ಅಣ್ಣಿ ದೇವಾಡಿಗರ ತಲೆಗೆ ಗಾಯವಾಗಿದೆ. ಆಂಬ್ಯುಲೆನ್ಸ್ ಅಣ್ಣಿ ದೇವಾಡಿಗರ ಸಂಬಂಧಿಕರಾದ ಗಣೇಶ ದೇವಾಡಿಗ ಮತ್ತು ಗೀತಾ ಅವರ ಕಣ್ಣಿಗೆ ಗಾಯವಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!