Sunday, June 29, 2025
Homeಕರಾವಳಿಕಡಬ; KSRTC ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ; ಬೈಕ್ ಸವಾರ ಸಾವು

ಕಡಬ; KSRTC ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ; ಬೈಕ್ ಸವಾರ ಸಾವು

spot_img
- Advertisement -
- Advertisement -

ಕಡಬ; KSRTC ಬಸ್ ಹಾಗೂ ಬೈಕ್ ಮಧ್ಯೆ ಅಪಘಾತ ಸಂಭವಿಸಿ ಬೈಕ್ ಸವಾರ ಸಾವನ್ನಪ್ಪಿರುವ ಘಟನೆ ಉಪ್ಪಿನಂಗಡಿ- ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಬಿಳಿನೆಲೆ ಬಳಿ  ಸೋಮವಾರ ನಡೆದಿದೆ.

ಕಡಬ ತಾಲೂಕು ಕೊಂಬಾರು ಮಣಿಭಂಡದ ವಾಸು ಮೃತ ಪಟ್ಟ ಬೈಕ್ ಸವಾರ. ಮೆಕ್ಯಾನಿಕ್  ಆಗಿ ಕೆಲಸ  ಮಾಡುತ್ತಿದ್ದ ವಾಸು ಮರ್ದಾಳದಲ್ಲಿ ಗ್ಯಾರೆಜ್ ಹೊಂದಿದ್ದರು. ಬಿಳಿನೆಲೆಯಲ್ಲಿ ಕೆ ಎಸ್ ಆರ್ ಟಿ ಸಿ ಬಸ್ ಇನ್ನೊಂದು ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರುನಿಂದ ಬಂದ ವಾಸು ಅವರ ಬೈಕ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ವಾಸು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ರೂ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!