ಮಂಗಳೂರು: ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲೆಯ ಅಲ್ಪ ಸಂಖ್ಯಾತ ಘಟಕದ ಉದ್ಘಾಟನೆ ಮತ್ತು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮಂಗಳೂರಿನ ಬಲ್ಮಠದ ಸೋಜಾ ಆರ್ಕೀಡ್ ನಲ್ಲಿರುವ ಆಮ್ ಆದ್ಮಿ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನೆರವೇರಿತು.

ಈ ವೇಳೆ ಜಿಲ್ಲೆಯ ಅನೇಕ ಯುವಕರು ಆಮ್ ಆದ್ಮಿ ಪಕ್ಷದ ಟೋಪಿ ಧರಿಸುವ ಮೂಲಕ ಸೇರ್ಪಡೆಯಾದ್ರು.
ಬಳಿಕ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಝ್ಫರ್ ರಜಾಕ್ ಮಾತನಾಡಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಆಮ್ ಆದ್ಮಿ ಅಗತ್ಯತೆ ಹೆಚ್ಚಿದೆ. ಯಾವುದೇ ಪಕ್ಷ ಸಂಘಟನೆಯ ವಿರುದ್ಧ ನಮ್ಮ ಹೋರಾಟ ಅಲ್ಲ. ಅಭಿವೃದ್ಧಿಯ ವಿರುದ್ಧದ ಹೋರಾಟದ ಮೂಲಕ ಆಮ್ ಆದ್ಮಿ ಜನ್ರ ಸೇವೆ ಮಾಡಲಿದೆ. ಇದರೊಂದಿಗೆ ಅಲ್ಪಸಂಖ್ಯಾತ ಘಟಕದ ಈ ಸ್ಥಾನ ನೀಡಿರುವ ಪಕ್ಷಕ್ಕೆ ನಾನು ಸದಾ ಚಿರ ಋಣಿ ಮಾತ್ರವಲ್ಲದೆ ಜನರ ಸೇವಕನಾಗಿ ನಿಷ್ಠೆಯಿಂದ ಮುಂದಿನ ದಿನಗಳಲ್ಲಿ ಕಾರ್ಯನಿರ್ವಹಿಸುತ್ತೇನೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್, ಜಿಲ್ಲಾ ಘಟಕ ಕಾರ್ಯಕರ್ತರ ಜೇಮ್ಸ್ ಫಿಲಿಪ್ ಡೆಸಾ, ಮಾಧ್ಯಮ ಸಲಹೆಗಾರ ವೆಂಕಟೇಶ್ ಬಾಳಿಗ, ಜೋಸ್ಲಿನ್ ಲೂಯಿಸ್ ಗಂಜಿಮಠ ಇತರರು ಉಪಸ್ಥಿತರಿದ್ರು.