Friday, June 5, 2026
Homeಕರಾವಳಿಕಡಬ: ನದಿಯಲ್ಲಿ ಸಿಲುಕಿ ಯುವಕನೋರ್ವ ನೀರುಪಾಲು!

ಕಡಬ: ನದಿಯಲ್ಲಿ ಸಿಲುಕಿ ಯುವಕನೋರ್ವ ನೀರುಪಾಲು!

- Advertisement -
- Advertisement -

ಕಡಬ : ಕಡಬ ಸಮೀಪದ ಕೆಮ್ಮಾರ ಸೇತುವೆಯ ಬಳಿ ನದಿ ನೀರಿನ ಸೆಳೆತಕ್ಕೆ ಯುವಕನೋರ್ವ ನೀರುಪಾಲಾದ ಘಟನೆ ಬುಧವಾರ ಸಂಭವಿಸಿದೆ.

ನೀರುಪಾಲಾದ ಯುವಕನನ್ನು ಸ್ಥಳೀಯ ನಿವಾಸಿ ಶಫೀಕ್(19) ಎಂದು ಗುರುತಿಸಲಾಗಿದೆ. ಎಡಬಿಡದೆ ಸುರಿಯುತ್ತಿರುವ ಭಾರಿ ಮಳೆಗೆ ನದಿಯಲ್ಲಿ ನೀರಿನ ಹರಿವು ಜೋರಾಗಿದ್ದು, ನೀರಿನಲ್ಲಿ ಕಣ್ಮರೆಯಾಗಿರುವುದಾಗಿ ತಿಳಿದುಬಂದಿದೆ.

ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಊರವರ ಸಹಾಯದಿಂದ ಯುವಕನ ಶೋಧ ಕಾರ್ಯ ಆರಂಭಗೊಂಡಿದೆ.

- Advertisement -

Latest News

error: Content is protected !!