Monday, June 8, 2026
Homeಕರಾವಳಿಮಂಗಳೂರು: ನಗರದ ಸ್ಟೀಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆ

ಮಂಗಳೂರು: ನಗರದ ಸ್ಟೀಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ನಾಪತ್ತೆ

- Advertisement -
- Advertisement -

ಮಂಗಳೂರು: ನಗರದಲ್ಲಿ ಸ್ಟೀಲ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಬ್ಬಳು ನ.2 ರಿಂದ ಕಾಣೆಯಾಗಿದ್ದಾಳೆ. ನಗರದ ಕಾರ್‌ಸ್ಟ್ರೀಟ್‌ನಲ್ಲಿರುವ ಸ್ಟೀಲ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ ಮಧುಶ್ರೀ (19) ಎಂಬಾಕೆಯೇ ನಾಪತ್ತೆಯಾದ ಯುವತಿ. ಈ ಬಗ್ಗೆ ತಾಯಿ ಮಮತಾ ಬಂದರ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಎಂದಿನಂತೆ ನ.2 ರಂದು  ಬೆಳಗ್ಗೆ ಸ್ಕೂಟರ್‌ನಲ್ಲಿ ಕೆಲಸಕ್ಕೆಂದು ಮನೆಯಿಂದ ಹೋಗಿದ್ದು, ಅಂದು ಮಧ್ಯಾಹ್ನ ಯಾರನ್ನೋ ನೋಡಲು ಹೋಗಿ ಬರುತ್ತೇನೆ ಎಂದು ಅಂಗಡಿಯಲ್ಲಿ ಇರುವವರ ಬಳಿ ಹೇಳಿ ಹೋಗಿದ್ದಾಳೆ. ಬಳಿಕ ಅಂಗಡಿಗೂ ಮರಳದೆ, ಮನೆಗೂ ಹೋಗದೇ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

- Advertisement -

Latest News

error: Content is protected !!