Monday, June 8, 2026
Homeತಾಜಾ ಸುದ್ದಿಹೆಚ್ಚು ಮೊಬೈಲ್ ಬಳಸಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಯುವತಿ ಆತ್ಮಹತ್ಯೆ

ಹೆಚ್ಚು ಮೊಬೈಲ್ ಬಳಸಬೇಡ ಎಂದು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಯುವತಿ ಆತ್ಮಹತ್ಯೆ

- Advertisement -
- Advertisement -

ಶಿವಮೊಗ್ಗ: ಯುವತಿಯೊಬ್ಬಳು ಹೆಚ್ಚಿನ ಸಮಯ ಮೊಬೈಲ್ ಬಳಕೆ ಮಾಡುವುದರಲ್ಲೇ ಕಳೆಯುತಿದ್ದಾಳೆಂದು ಪೋಷಕರು ಬುದ್ಧಿ ಹೇಳಿದ್ದಕ್ಕೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ಯುವತಿಯನ್ನು ಧನುಶ್ರೀ (20) ಎಂದು ಗುರುತಿಸಲಾಗಿದೆ.

ಧನುಶ್ರೀ ಶಿವಮೊಗ್ಗದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದಳು. ಆಕೆ ಹೆಚ್ಚಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಳು ಎನ್ನಲಾಗಿದೆ. ಪೋಷಕರು ಇದನ್ನು ಗಮನಿಸಿ, ಮೊಬೈಲ್ ಹೆಚ್ಚು ಬಳಸಬೇಡ, ಓದಿನ ಕಡೆ ಗಮನ ಕೊಡು ಎಂದು ಬುದ್ಧಿ ಹೇಳಿದ್ದರು ಎನ್ನಲಾಗಿದೆ. ಆದರೆ ವಿದ್ಯಾರ್ಥಿನಿ ಇದೇ ವಿಚಾರಕ್ಕೆ ಮನನೊಂದ ಕಳೆದ 3 ದಿನದ ಹಿಂದೆ ಮನೆಯಲ್ಲಿ ವಿಷ ಸೇವಿಸಿದ್ದಳು.

ವಿಷ ಸೇವಿಸಿದ್ದ ವಿದ್ಯಾರ್ಥಿಯನ್ನು ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಆಕೆ ಗುರುವಾರದಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

- Advertisement -

Latest News

error: Content is protected !!