Wednesday, July 15, 2026
Homeಕರಾವಳಿಮಂಗಳೂರುಮಂಗಳೂರು: ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು

ಮಂಗಳೂರು: ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವು

- Advertisement -
- Advertisement -

ಮಂಗಳೂರು: ಶುಕ್ರವಾರದಂದು ಮಂಗಳೂರಿನ ಯೆಯ್ಯಾಡಿಯಲ್ಲಿ ಚಾಕು ಇರಿತಕ್ಕೆ ಒಳಗಾಗಿ ಗಂಭೀರ ಗಾಯಗೊಂಡಿದ್ದ ಯುವಕ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಕೌಶಿಕ್ ಮೃತ ಯುವಕ.

ಅಂದಹಾಗೆ ಕಳೆದ ಶುಕ್ರವಾರ ಮಂಗಳೂರಿನ ಯೆಯ್ಯಾಡಿಯಲ್ಲಿ ಮಧ್ಯಾಹ್ನದಂದು ಕೌಶಿಕ್ ಹಾಗೂ ಇತರರ ನಡುವೆ ಗಲಾಟೆಯಾಗಿತ್ತು. ಗಲಾಟೆಯ ಸಂದರ್ಭದಲ್ಲಿ ಬ್ರಿಜೇಶ್ ಶೆಟ್ಟಿ, ಗಣೇಶ್ ಬಿಜೈ ಎಂಬುವರು ಚಾಕುವಿನಿಂದ ಕೌಶಿಕ್ ಹೊಟ್ಟೆಗೆ ಇರಿದಿದ್ದರು. ತೀವ್ರ ರಕ್ತಸ್ತ್ರಾವದಿಂದ ಗಾಯಗೊಂಡಿದ್ದಂತ ಕೌಶಿಕ್ ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು.

ಇಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಂತ ಕೌಶಿಕ್ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ. ಹೀಗಾಗಿ ಕೊಲೆ ಯತ್ನ ಪ್ರಕರಣ, ಈಗ ಕೊಲೆ ಪ್ರಕರಣವಾಗಿ ಬದಲಾದಂತೆ ಆಗಿದೆ. ಇನ್ನು ಕೊಲೆಗೆ ಇಬ್ಬರ ನಡುವಿನ ಹಳೇ ವೈಷಮ್ಯವೇ ಕಾರಣ ಎನ್ನಲಾಗಿದೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

- Advertisement -

Latest News

error: Content is protected !!