Tuesday, June 9, 2026
Homeಅಪರಾಧಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಯುವಕ ಪೊಲೀಸ್ ವಶಕ್ಕೆ

ಅಕ್ರಮವಾಗಿ ಮಾದಕ ವಸ್ತು ಸಾಗಾಟ ಮಾಡುತ್ತಿದ್ದ ಯುವಕ ಪೊಲೀಸ್ ವಶಕ್ಕೆ

- Advertisement -
- Advertisement -

ಉಳ್ಳಾಲ: ಮಂಗಳೂರಿನಲ್ಲಿ ಯುವಕನೊಬ್ಬ ಮಾದಕ ವಸ್ತು ಎಂಡಿಎಂಎ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ವೇಳೆಯಲ್ಲಿ ಸಿಕ್ಕಿಬಿದ್ದಿದ್ದು, ಆತನನ್ನು ಮಂಗಳೂರಿನ ಆ್ಯಂಟಿ ಡ್ರಗ್ ಟೀಮ್‌ನ ತಂಡ ಬಂಧಿಸುವಲ್ಲಿ ಯಶಸ್ವಿಯಾಗಿದೆ.

ಬಂಧಿತ ಆರೋಪಿ ಕೋಟೆಕಾರು ಕೆ.ಸಿ. ರೋಡ್ ನಿವಾಸಿ ಆಸೀಫ್ (27). ಈತನಿಂದ 4.41 ಗ್ರಾಂ ಎಂಡಿಎಂಎ ಸಹಿತ ಸಾಗಾಟಕ್ಕೆ ಬಳಸಿದ್ದ ಬೈಕ್ ಹಾಗೂ ಸುಮಾರು 68 ಸಾವಿರ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಆರೋಪಿಯನ್ನು ಕೋಟೆಕಾರ್ ಗ್ರಾಮದ ಕೆ.ಸಿ. ನಗರ ಯು.ಜಿ. ಗೇಟ್‌ರೋಡ್‌ನ ಸಾರ್ವಜನಿಕ ರಸ್ತೆ ಬದಿಯ ಖಾಲಿ ಜಾಗದ ಬಳಿಗೆ ದಾಳಿ ನಡೆಸಿ ಬಂಧಿಸಲಾಗಿದೆ. ಪ್ರಕರಣದ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

- Advertisement -

Latest News

error: Content is protected !!