Thursday, July 16, 2026
Homeಕರಾವಳಿಉಪ್ಪಿನಂಗಡಿ: ಸ್ನಾನ ಮಾಡಲೆಂದು ನದಿಗೆ ಇಳಿದ ಯುವಕ ನೀರುಪಾಲು- ಇಂದು ಮೃತ ದೇಹ ಪತ್ತೆ

ಉಪ್ಪಿನಂಗಡಿ: ಸ್ನಾನ ಮಾಡಲೆಂದು ನದಿಗೆ ಇಳಿದ ಯುವಕ ನೀರುಪಾಲು- ಇಂದು ಮೃತ ದೇಹ ಪತ್ತೆ

- Advertisement -
- Advertisement -

ಉಪ್ಪಿನಂಗಡಿ: ಮೂರು ದಿನಗಳ ಹಿಂದೆ ಬೊಳ್ಳಾರು ಬಳಿಯ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲೆಂದು ಇಳಿದ ಯುವಕನೋರ್ವ ನೀರುಪಾಲಾಗಿದ್ದ. ಇದೀಗ ಅಗ್ನಿಶಾಮಕ ದಳ ಸಿಬ್ಬಂದಿಗಳ ನಿರಂತರ ಹುಡುಕಾಟದಿಂದ ಯುವಕನ ಮೃತದೇಹವು ಪೆರ್ನೆ ಸಮೀಪ ಬಿಳಿಯೂರು ಎಂಬಲ್ಲಿ ನದಿ ದಡದಲ್ಲಿ ಪತ್ತೆಯಾಗಿದೆ.

ಮೃತ ಯುವಕನನ್ನು ಸ್ವರ್ಣ ಭೂಮಿ ಬೋರ್ ವೆಲ್ ಕಾರ್ಮಿಕ ಸುಕ್ಮೋ ರಾಮ್ ಗೋವಡೆ ಎನ್ನಲಾಗಿದೆ. ಕಳೆದ ಮೂರು ದಿನಗಳ ಹಿಂದೆ ಬೊಳ್ಳಾರು ಎಂಬಲ್ಲಿ ನದಿ ನೀರಿನಲ್ಲಿ ಸ್ನಾನ ಮಾಡುವ ವೇಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದರು.

- Advertisement -

Latest News

error: Content is protected !!