Thursday, June 4, 2026
Homeಕರಾವಳಿಚಿನ್ನದಂಗಡಿಯಲ್ಲಿ ಉಂಗುರ ಕದಿಯುವಾಗ ಸಿಕ್ಕಿ ಬಿದ್ದ ಯುವಕ

ಚಿನ್ನದಂಗಡಿಯಲ್ಲಿ ಉಂಗುರ ಕದಿಯುವಾಗ ಸಿಕ್ಕಿ ಬಿದ್ದ ಯುವಕ

- Advertisement -
- Advertisement -

ಕಾಸರಗೋಡು : ಜ್ಯುವೆಲ್ಲರಿ ಶಾಪ್ ಗೆ ಗ್ರಾಹಕನ ಸೋಗಿನಲ್ಲಿ ಬಂದು ಉಂಗುರ ಕದಿಯುವಾಗ ಯುವಕನೊಬ್ಬ ಸಿಕ್ಕಿ ಬಿದ್ದ ಘಟನೆ ಕಾಸರಗೋಡಿನ ಕೆನರಾ ಜ್ಯುವೆಲ್ಲರಿ ಶಾಪ್ ನಲ್ಲಿ ನಡೆದಿದೆ. ಕಾಸರಗೋಡು ನಿವಾಸಿ ಸಾಜು ಸಿಕ್ಕಿ ಬಿದ್ದ ಕಳ್ಳ.


ಈತ ನಗರದ ಕೆನರಾ ಜ್ಯುವೆಲ್ಲರಿಗೆ ಗ್ರಾಹಕನ ಸೋಗಿನಲ್ಲಿ ಬಂದು ಉಂಗುರ ಬೇಕು ಎಂದು ಕೇಳಿದ್ದಾನೆ. ಅದನ್ನು ತೋರಿಸುವಾಗ ಚೈನ್ ತೋರಿಸಿ ಎಂದಿದ್ದಾನೆ. ಜ್ಯುವೆಲ್ಲರಿಯವರು ಚೈನ್ ತೋರಿಸುವಾಗ ಈತ ಉಂಗುರ ಹಿಡಿದುಕೊಂಡು ಓಡಿದ್ದಾನೆ. ಜ್ಯುವೆಲ್ಲರಿ‌ಯ ಮಾಲೀಕ  ಸ್ಥಳೀಯರ ನೆರವಿನಿಂದ ಕಳ್ಳನನ್ನು‌ ಬೆನ್ನಟ್ಟಿ ಹಿಡಿದು ಅವನಿಂದ ಉಂಗುರ ವಾಪಾಸು ಪಡೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ.

- Advertisement -

Latest News

error: Content is protected !!