Sunday, June 7, 2026
Homeಕರಾವಳಿಕೊಣಾಜೆ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ!

ಕೊಣಾಜೆ: ಯುವಕನೋರ್ವ ನೇಣು ಬಿಗಿದು ಆತ್ಮಹತ್ಯೆ!

- Advertisement -
- Advertisement -

ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ಮೂಡಿಜೇರ ಸೈಟ್ ನಲ್ಲಿ ಯುವಕನೋರ್ವ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಮೃತನನ್ನು ಕೊಣಾಜೆ ಸಮೀಪದ ನಾರಾಯಣ ಶೆಟ್ಟಿ ಎಂಬವರ ಪುತ್ರ ಮಹೇಶ್ ಶೆಟ್ಟಿ(35) ಎಂದು ಗುರುತಿಸಲಾಗಿದೆ. ಅವಿವಾಹಿತನಾದ ಮಹೇಶ್ ಶೆಟ್ಟಿ ಪ್ಲಂಬರ್ ಆಗಿ ಕೆಲಸ ಮಾಡುತ್ತಿದ್ದ. ಓರ್ವನೇ ಪುತ್ರನಾಗಿರುವ ಇವರು ಮನೆಗೆ ಆಧಾರವಾಗಿದ್ದರು . ಇಬ್ಬರು ಸಹೋದರಿಯರು ವಿವಾಹಿತರಾಗಿದ್ದಾರೆ.

ತಾಯಿ ತನ್ನ ಸಹೋದರಿ ಮನೆಗೆ ತೆರಳಿದ್ದ ಸಂದರ್ಭ ಮಹೇಶ್ ಮನೆಯಲ್ಲಿ ಒಬ್ಬರೇ ಇದ್ದರು. ಸಂಜೆ ಗೆಳೆಯರ ಜೊತೆಗೆ ಕ್ರಿಕೆಟ್ ಆಟವಾಡಿ ಮನೆಗೆ ಬಂದಿದ್ದ ಮಹೇಶ್, ಗೆಳೆಯರಿಗೆ ವಾಟ್ಸ್ಯಾಪ್ ನಲ್ಲಿ ಫಾರ್ವರ್ಡ್ ಮೆಸೇಜ್ ಗಳನ್ನು ಮಾಡಿದ್ದರು. ಆದರೆ ಸಂಜೆ 7 ರ ನಂತರ ಫಿನಾಯಿಲ್ ಸೇವಿಸಿ, ಅರ್ಧ ದೋಸೆ ತಿಂದು ಬಳಿಕ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಘಟನೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಮೊಬೈಲ್ ವಶಕ್ಕೆ ಪಡೆದುಕೊಂಡಿರುವ ಕೊಣಾಜೆ ಪೊಲೀಸರು ಅದನ್ನು ಅನ್ಲಾಕ್ ನಡೆಸಿದ ಬಳಿಕವಷ್ಟೇ ಕಾರಣ ತಿಳಿದುಬರಲಿದೆ ಎಂದು ಹೇಳಲಾಗಿದೆ.

- Advertisement -

Latest News

error: Content is protected !!