Saturday, June 27, 2026
Homeಚಿಕ್ಕಮಗಳೂರುಜೋಗ ಜಲಪಾತ ನೋಡಲು ಬಂದಿದ್ದ ಬೆಂಗಳೂರಿನ ಯುವಕ ನಾಪತ್ತೆ; ಸತತ ಆರು ದಿನಗಳಿಂದ ನಡೆಯುತ್ತಿರುವ ಶೋಧ...

ಜೋಗ ಜಲಪಾತ ನೋಡಲು ಬಂದಿದ್ದ ಬೆಂಗಳೂರಿನ ಯುವಕ ನಾಪತ್ತೆ; ಸತತ ಆರು ದಿನಗಳಿಂದ ನಡೆಯುತ್ತಿರುವ ಶೋಧ ಕಾರ್ಯ

- Advertisement -
- Advertisement -

ಶಿವಮೊಗ್ಗ: ಬೆಂಗಳೂರಿನಿಂದ ಜೋಗ ಜಲಪಾತ ವೀಕ್ಷಣೆಗೆಂದು ಆಗಮಿಸಿದ್ದ ಯುವಕನೋರ್ವ ಜಲಪಾತದ ಬಳಿ ಕಣ್ಮರೆಯಾದ ಘಟನೆ ನಡೆದಿದ್ದು, ಹುಡುಕಾಟ ನಡೆಸಲಾಗುತ್ತಿದೆ.

ಗದಗ ಮೂಲದ ಆನಂದ್ (24) ಬೆಂಗಳೂರಿನಲ್ಲಿ ಟೀ ಅಂಗಡಿ ನಡೆಸುತ್ತಿದ್ದು, ಇದೀಗ ಜಲಪಾತದ ಬಳಿ ನಾಪತ್ತೆಯಾಗಿದ್ದಾರೆ.

ಆನಂದ್ ಜೋಗ ಜಲಪಾತಕ್ಕೆ ಜುಲೈ 15ರಂದು ಆಗಮಿಸಿದ್ದ. ಯಾತ್ರಿ ನಿವಾಸದ ಸೀತಾಕಟ್ಟೆ ಬ್ರಿಡ್ಜ್ ಬಳಿಯಿಂದ ಬೇಲಿ ದಾಟಿ, ಜಲಪಾತದ ಬಳಿ ಆಗಮಿಸಿದ್ದ. ಯುವಕ ತಂದಿದ್ದ ಬ್ಯಾಗ್ ಸಿಕ್ಕಿದ್ದು ಕಳೆದ ಆರು ದಿನಗಳಿಂದಲೂ ಯುವಕನಿಗಾಗಿ ಶೋಧ ಮುಂದುವರಿಸಲಾಗಿದೆ.

ಕಾರ್ಗಲ್ ಠಾಣೆ ಪೊಲೀಸರು ನಾಪತ್ತೆ ದೂರು ದಾಖಲಿಸಿಕೊಂಡು ಯುವಕನಿಗಾಗಿ ಜಲಪಾತದ ಬಳಿ ಶೋಧ ಕಾರ್ಯ ಮುಂದುವರಿಸಿದ್ದಾರೆ.

- Advertisement -

Latest News

error: Content is protected !!