Sunday, June 7, 2026
Homeಕರಾವಳಿಮಂಗಳೂರು : ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋಗಿ ವಿದ್ಯುತ್ ಶಾಕ್...

ಮಂಗಳೂರು : ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋಗಿ ವಿದ್ಯುತ್ ಶಾಕ್ ಹೊಡೆದು ಯುವಕ ಸಾವು…!

- Advertisement -
- Advertisement -

ಮಂಗಳೂರು: ನಿಂತಿದ್ದ ಗೂಡ್ಸ್ ರೈಲಿನ ಮೇಲೆ ಹತ್ತಿ ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ಸಾವನ್ನಪ್ಪಿದ ಘಟನೆ ಸುರತ್ಕಲ್ ರೈಲ್ವೆ ಸ್ಟೇಷನ್ ನಿಲ್ದಾಣದ ಸಮೀಪದ ಅಗರಮೇಲುನಲ್ಲಿ ಇಂದು ಸಂಜೆ ನಡೆದಿದೆ. ಸೆಲ್ಫಿ ತೆಗೆಯುವ ವೇಳೆ ವಿದ್ಯುತ್ ಶಾಕ್ ಗೆ ಒಳಗಾಗಿ ಯುವಕ ಭಾಗಶಃ ಸುಟ್ಟು ಹೋಗಿದ್ದಾರೆ.

ಸಲಾನ್ ಪಾರಸ್ (21) ಅವಘಡಕ್ಕೆ ಒಳಗಾದ ಯುವಕ, ಸುರತ್ಕಲ್ ಕೊಂಕಣ ರೈಲ್ವೇ ನಿಲ್ದಾಣ ವಿದ್ಯುತ್ತೀಕರಣಗೊಂಡಿದ್ದು, ಕೆಳಮಟ್ಟದಲ್ಲಿ ಹೈವೋಲ್ವೇಜ್ ತಂತಿಗಳನ್ನು ಆಳವಡಿಸಲಾಗಿದೆ. ಅಪಾಯದ ಬೋರ್ಡನ್ನು ಕೂಡ ಹಾಕಲಾಗಿತ್ತು.

ನಿಂತಿದ್ದ ಗೂಡ್ಸ್ ರೈಲಿನ ಮೇಲೇರಿ ಸೆಲ್ಫಿ ತೆಗೆಯಲು ತೆರಳಿದ ಸಲಾನ್ ಹೈವೋಲ್ಟೇಜ್ ತಂತಿಗಳನ್ನು ಗಮನಿಸದೇ ಇದ್ದುದ್ದರಿಂದ ವಿದ್ಯುತ್ ಶಾಕ್ ಹೊಡೆದು ಭಾಗಶಃ ಸುಟ್ಟು ಹೋಗಿದ್ದಾನೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!