Sunday, June 7, 2026
Homeತಾಜಾ ಸುದ್ದಿವಿಧವೆಯ ಮೂಗು, ನಾಲಿಗೆ ಕತ್ತರಿಸಿ ಕ್ರೌರ್ಯ ಮೆರೆದ ಅತ್ತಿಗೆ!.. ಮರು ಮದುವೆಯಾಗಲು ನಿರಾಕರಿಸಿದ್ದೇ ತಪ್ಪಾ?

ವಿಧವೆಯ ಮೂಗು, ನಾಲಿಗೆ ಕತ್ತರಿಸಿ ಕ್ರೌರ್ಯ ಮೆರೆದ ಅತ್ತಿಗೆ!.. ಮರು ಮದುವೆಯಾಗಲು ನಿರಾಕರಿಸಿದ್ದೇ ತಪ್ಪಾ?

- Advertisement -
- Advertisement -

ರಾಜಸ್ಥಾನ: ಇಲ್ಲಿನ ಜೈಸಲ್ಮೇರ್ ನಗರದಲ್ಲಿ ಸಂಬಂಧಿಯೊಂದಿಗೆ ಮದುವೆಯಾಗಲು ನಿರಾಕರಿಸಿದ ವಿಧವೆಯ ಮೂಗು ಬಾಯನ್ನು ಆಕೆಯ ಅತ್ತಿಗೆಯೇ ಕತ್ತರಿಸಿದ ಕ್ರೂರ ಘಟನೆ ನಡೆದಿದೆ. ಆರೋಪಿ ಮಹಿಳೆಯನ್ನು ಬಂಧಿಸಲಾಗಿದ್ದು ಕೃತ್ಯದಲ್ಲಿ ಭಾಗಿಯಾಗಿರುವ ಇನ್ನುಳಿದವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸಂತ್ರಸ್ತ ಮಹಿಳೆ ಆರು ವರ್ಷಗಳ ಹಿಂದೆ ಮದುವೆಯಾಗಿದ್ದು ಕಳೆದ ವರ್ಷ ಆಕೆಯ ಪತಿ ಸಾವನ್ನಪ್ಪಿದ್ದ. ಆಕೆಗೆ ಸಂಬಂಧಿಯೊಬ್ಬನ ಜೊತೆ ಮರು ಮದುವೆಯನ್ನು ಮಾಡಲು ಅತ್ತಿಗೆ ಪ್ರಯತ್ನಿಸುತ್ತಿದ್ದಳು ಅದನ್ನು ನಿರಾಕರಿಸಿದ ಕಾರಣಕ್ಕೆ ಈ ಹೇಯ ಕೃತ್ಯ ಎಸಗಿದ್ದಾಳೆ.

ಸಂತ್ರಸ್ತೆಯ ಮನೆಗೆ ಧಾವಿಸಿ ಹಲ್ಲೆ ಮಾಡಿ ಮೂಗು, ನಾಲಿಗೆ ಕತ್ತರಿಸಿ ಬಲಗೈ ಮುರಿದಿದ್ದಾರೆ. ಈ ನಡುವೆ ಆಕೆಯ ರಕ್ಷಣೆಗೆಂದು ಹೋದ ಆಕೆಯ ಅಮ್ಮನ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ.

- Advertisement -

Latest News

error: Content is protected !!