- Advertisement -
- Advertisement -
ಬಂಟ್ವಾಳ: ಬಿ.ಸಿ.ರೋಡು ಕೈಕುಂಜೆ ರಸ್ತೆಯಲ್ಲಿ ತೋಟಗಾರಿಕಾ ಕಚೇರಿಯ ಬಳಿ ಗಾಳಿಗೆ ಮರವೊಂದು ಬಿದ್ದ ಪರಿಣಾಮ ಆಟೋ ರಿಕ್ಷಾ ಹಾಗೂ ಮಾರುತಿ 800 ಕಾರು ಜಖಂಗೊಂಡ ಘಟನೆ ಶುಕ್ರವಾರ ನಡೆದಿದೆ.
ಘಟನೆಯಿಂದ ಕೈಕುಂಜೆ ರಸ್ತೆಯಲ್ಲಿ ಕೆಲಹೊತ್ತು ಅಸ್ತವ್ಯಸ್ತಗೊಂಡಿತ್ತು. ಬಳಿಕ ಕ್ರೇನ್ ಮೂಲಕ ಮರವನ್ನು ತೆರವು ಕಾರ್ಯಾಚರಣೆ ನಡೆಸಲಾಯಿತು. ಬಿ.ಸಿ.ರೋಡಿನಲ್ಲಿ ಮಧ್ಯಾಹ್ನ 12 ಸುಮಾರಿಗೆ ಮಳೆಯ ಜತೆ ಗಾಳಿ ಕೂಡ ಆಗಮಿಸಿದ್ದು, ಈ ವೇಳೆ ಮರ ಬಿದ್ದಿದೆ. ದಿನದ ಇಡೀ ಹೊತ್ತು ವಾಹನ ನಿಬಿಡ, ಜನ ನಿಬಿಡ ರಸ್ತೆಯಾಗಿದ್ದು, ಆದರೆ ಘಟನೆಯಿಂದ ಯಾವುದೇ ಜೀವ ಹಾನಿ ಸಂಭವಿಸಿಲ್ಲ.
ಮರ ಬಿದ್ದ ಸಂದಂರ್ಭ ಅದೇ ರಸ್ತೆಯಲ್ಲಿ ಪೊಲೀಸರು ಸಂಚರಿಸುತ್ತಿದ್ದರೂ, ಕನಿಷ್ಟ ಪಕ್ಷ ಘಟನೆಯಲ್ಲಿ ಏನಾಗಿದೆ ಎಂದು ವಿಚಾರಿಸದೇ ತೆರಳಿರುವುದು ಸ್ಥಳೀಯರ ಕೆಂಗಣ್ಣಿಗೆ ಗುರಿಯಾಗಿದೆ.
- Advertisement -