- Advertisement -
- Advertisement -
ಉಡುಪಿ: ವಿಭಿನ್ನ ಮಾದರಿಯ ಕಳ್ಳತನ ಪ್ರಕರಣಗಳು ಉಡುಪಿ ಹಾಗೂ ಮಣಿಪಾಲ ಭಾಗದಲ್ಲಿ ದಿನನಿತ್ಯ ವರದಿಯಾಗುತ್ತಿದೆ.
ಶಾಂತಾ ಕಾಮತ್ (84) ಅವರು ಮಣಿಪಾಲ ಠಾಣೆ ವ್ಯಾಪ್ತಿಯ ಹಯಗ್ರೀವ ನಗರದ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ, ಅವರ ಬಳಿಯಿದ್ದ 20 ಗ್ರಾಂ ತೂಕದ ಚೈನ್ ಅನ್ನು ಕಳ್ಳನೊಬ್ಬ ಕಸಿದು ಪರಾರಿಯಾಗಿರುವ ಘಟನೆ ಆ.5ರಂದು ಬೆಳಗ್ಗೆ 7 ಗಂಟೆಗೆ ಸಂಭವಿಸಿದೆ.
ಸಗ್ರಿನೋಳೆ ಶಾಲೆ ರಸ್ತೆಯಲ್ಲಿ ಕುಂಡೇಲು ಎಂಬಲ್ಲಿ ಶಾಂತಾ ಮನೆ ಕೆಲಸಕ್ಕೆಂದು ನಡೆದುಕೊಂಡು ಹೋಗುತ್ತಿದ್ದಾಗ ಹಿಂದುಗಡೆಯಿಂದ ಬಂದ ವ್ಯಕ್ತಿ ಚೈನ್ ಕಸಿದು ಪರಾರಿಯಾಗಿದ್ದಾನೆ.ಕಳ್ಳ ಸುಮಾರು 30ರಿಂದ 35 ವರ್ಷದವನು ಎಂದು ಅಂದಾಜಿಸಲಾಗಿದೆ.
- Advertisement -