Wednesday, June 24, 2026
Homeಕರಾವಳಿಮೊಬೈಲ್‌ ಕಿತ್ತುಕೊಂಡದ್ದಕ್ಕೆ ಮನೆ ಬಿಟ್ಟು ನಾಪತ್ತೆಯಾದ ವಿದ್ಯಾರ್ಥಿ

ಮೊಬೈಲ್‌ ಕಿತ್ತುಕೊಂಡದ್ದಕ್ಕೆ ಮನೆ ಬಿಟ್ಟು ನಾಪತ್ತೆಯಾದ ವಿದ್ಯಾರ್ಥಿ

- Advertisement -
- Advertisement -

ಮಂಗಳೂರು: ಪಿಯುಸಿ ವಿದ್ಯಾರ್ಥಿಯೋರ್ವನಿಂದ ಆತನ ಮನೆಯವರು ಮೊಬೈಲ್‌ ಅನ್ನು ಕಿತ್ತುಕೊಂಡದ್ದಕ್ಕೆ ಆತ ಮನೆ ಬಿಟ್ಟು ಹೋದ ಘಟನೆ ನಡೆದಿದ್ದು, ಈ ಕುರಿತಂತೆ ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾಗಿದೆ.

ನಾಪತ್ತೆಯಾಗಿರುವ ವಿದ್ಯಾರ್ಥಿ ವಾಮಂಜೂರು ಸೈಂಟ್‌ ರೈಮಂಡ್ಸ್‌ ಪ.ಪೂ. ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಮೇಗಿನಪೇಟೆ ನಿವಾಸಿ ಮುಹಮ್ಮದ್‌ ಯಾಸೀನ್‌ ಅಫ್ನಾನ್‌ (16) ಎಂದು ತಿಳಿದು ಬಂದಿದೆ.

ಮೊಬೈಲ್ ಅನ್ನು ಈತ ನಿರಂತರವಾಗಿ ಬಳಕೆ ಮಾಡುವ ಚಟವನ್ನು ಹೊಂದಿದ್ದು, ಈತನ ಮನೆಯವರು ಸೆ. 25ರಂದು ಮನೆಯಲ್ಲಿರುವಾಗ ಅವನ ಬಳಿಯಿದ್ದ ಮೊಬೈಲ್‌ ಅನ್ನು ಕಿತ್ತುಕೊಂಡಿದ್ದರು. ಮೊಬೈಲ್ ತೆಗೆದುಕೊಂಡ ವಿಚಾರ ಕುರಿತು ಮನೆಯಲ್ಲಿ ಮಾತುಕತೆ ಕೂಡ ನಡೆದಿತ್ತು. ಅನಂತರ ಮನೆಯಿಂದ ಕಾಲೇಜಿಗೆ ಹೋಗಿ ಬರುತ್ತೇನೆಂದು ಹೇಳಿ ಹೋದ ಮಹಮ್ಮದ್‌ ಯಾಸೀನ್‌ ಕಾಲೇಜಿಗೆ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಮುಹಮ್ಮದ್‌ ಯಾಸೀನ್‌ ಅಫ್ನಾನ್‌ 5.2 ಅಡಿ ಎತ್ತರ, ಎಣ್ಣೆಕಪ್ಪು ಮೈಬಣ್ಣ, ಕಪ್ಪು ಕೂದಲು, ಸಾಧಾರಣ ಶರೀರ, ಕೋಲುಮುಖ ಹೊಂದಿದ್ದು ನೀಲಿ ಮತ್ತು ಹಸುರು ಬಣ್ಣದ ನ್ಪೋರ್ಟ್ಸ್ ಟಿ ಶರ್ಟ್‌, ನೀಲಿ ಬಣ್ಣದ ಪ್ಯಾಂಟ್‌ ಹಾಗೂ ಎಡಕೈಗೆ ಸಿಲ್ವರ್‌ ಕಲರ್‌ ವಾಚ್‌ ಧರಿಸಿ‌ದ್ದಾನೆ. ಈತ ತುಳು, ಕನ್ನಡ, ಬ್ಯಾರಿ ಭಾಷೆ ಬಲ್ಲವನಾಗಿದ್ದಾನೆ. ಮಾಹಿತಿ ದೊರೆತವರು ಮಂಗಳೂರು ದಕ್ಷಿಣ ಪೊಲೀಸ್‌ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

- Advertisement -

Latest News

error: Content is protected !!