Saturday, June 13, 2026
Homeಕರಾವಳಿಕಾಸರಗೋಡುಕಾಸರಗೋಡು:ನೆಟ್ ವರ್ಕ್ ಸಮಸ್ಯೆ ; ಆನ್ ಲೈನ್ ತರಗತಿಗೆಂದು ಮರವೇರಿದ ವಿದ್ಯಾರ್ಥಿಯೊಬ್ಬ ಕೆಳಕ್ಕೆ ಬಿದ್ದು ಗಂಭೀರ...

ಕಾಸರಗೋಡು:ನೆಟ್ ವರ್ಕ್ ಸಮಸ್ಯೆ ; ಆನ್ ಲೈನ್ ತರಗತಿಗೆಂದು ಮರವೇರಿದ ವಿದ್ಯಾರ್ಥಿಯೊಬ್ಬ ಕೆಳಕ್ಕೆ ಬಿದ್ದು ಗಂಭೀರ ಗಾಯ!

- Advertisement -
- Advertisement -

ಕಾಸರಗೋಡು: ಕಣ್ಣೂರು ಕಣ್ಣವ ಬಳಿ ಆನ್ ಲೈನ್ ತರಗತಿಗೆಂದು ಮರ ಹತ್ತಿದ್ದ ವಿದ್ಯಾರ್ಥಿಯೊಬ್ಬ ಕೆಳಬಿದ್ದು ಗಂಭೀರ ಗಾಯಗೊಂಡ ಘಟನೆ ನಿನ್ನೆ ಸಂಜೆ ನಡೆದಿದೆ.

ಗಾಯಗೊಂಡ ವಿದ್ಯಾರ್ಥಿಯನ್ನು ಅನಂತು ಬಾಬು ಎಂದು ಗುರುತಿಸಲಾಗಿದ್ದು, ಕಣ್ಣೂರು ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.



ಪ್ಲಸ್ ವನ್ ಅಲೋಟ್ ಮೆಂಟ್ ವೀಕ್ಷಿಸಲು ಈತ ಮನೆ ಸಮೀಪದ ಮರ ಏರಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ. ಮೊಬೈಲ್ ರೇಂಜ್ ಲಭಿಸದಿರುವುದರಿಂದ ಮರವೇರಿ ರೆಂಬೆಯಲ್ಲಿ ಕುಳಿತು ವೀಕ್ಷಿಸುತ್ತಿದ್ದಾಗ ಆಕಸ್ಮಿಕವಾಗಿ ಕೆಳಬಿದ್ದು ಈ ಘಟನೆ ನಡೆದಿದ್ದು , ಬೆನ್ನು ಮೂಳೆಗೆ ಗಾಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಈ ಕಾಲನಿಯಲ್ಲಿ 72 ರಷ್ಟು ವಿದ್ಯಾರ್ಥಿಗಳಿದ್ದಾರೆ. ಇವರು ಆನ್ ಲೈನ್ ತರಗತಿಗೆ ರೇಂಜ್ ಹುಡುಕಿಕೊಂಡು ಗುಡ್ಡ ಬೆಟ್ಟ ಸುತ್ತಾಡಬೇಕು . ಇಲ್ಲದಿದ್ದಲ್ಲಿ ಮರವೇರಬೇಕಾದ ಅನಿವಾರ್ಯ ಸ್ಥಿತಿ ಉಂಟಾಗುತ್ತಿದೆ.

- Advertisement -

Latest News

error: Content is protected !!