Monday, May 20, 2024
Homeಕರಾವಳಿನೆರಿಯ ಒಂಟಿ ಸಲಗ ಕಾರಿನ ಮೇಲೆ ದಾಳಿ ಪ್ರಕರಣ; ಇಬ್ಬರ ಕಾಲು ಮುರಿತ, ಮೂರು ಮಕ್ಕಳು...

ನೆರಿಯ ಒಂಟಿ ಸಲಗ ಕಾರಿನ ಮೇಲೆ ದಾಳಿ ಪ್ರಕರಣ; ಇಬ್ಬರ ಕಾಲು ಮುರಿತ, ಮೂರು ಮಕ್ಕಳು ಸೇರಿ ಐದು ಜನ ಪ್ರಾಣಾಪಾಯದಿಂದ ಪಾರು

spot_img
- Advertisement -
- Advertisement -

ಬೆಳ್ತಂಗಡಿ : ಕುಟುಂಬವೊಂದು ತನ್ನ ಪತ್ನಿ ಮನೆಗೆ ಬಂದು ಉಜಿರೆ ಶಾಪಿಂಗ್ ಹೋಗಿ ವಾಪಸ್ ನೆರಿಯ ಪತ್ನಿ ಮನೆಗೆ ಹೋಗುವಾಗ ಒಂಟಿ ಸಲಗ ಕಾರಿಗೆ ಮೇಲೆ ದಾಳಿ ಮಾಡಿದ್ದು ಇಬ್ಬರಿಗೆ ಗಾಯವಾಗಿದ್ದು , ಮೂರು ಮಕ್ಕಳು ಸೇರಿ ಐದು ಜನ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದಲ್ಲಿ ನ.27 ರಂದು ರಾತ್ರಿ 8:30 ರ ಸಮಯಕ್ಕೆ ನಡೆದಿದೆ.

ಈ ಬಗ್ಗೆ ಮಹಾ ಎಕ್ಸ್‌ಪ್ರೆಸ್‌ ವೆಬ್ ಸೈಟ್ ತಂಡ ನೆರಿಯ ಘಟನಾ ಸ್ಥಳಕ್ಕೆ ಹಾಗೂ ಗಾಯಗೊಂಡವರಿದ್ದ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಗೆ ಭೇಟಿ ನೀಡಿ ಪ್ರತ್ಯಕ್ಷ ವರದಿ ಮಾಡಿದೆ.

ಗಂಭೀರ ಗಾಯಗೊಂಡ ಕಾರಿನಲ್ಲಿದ್ದ ಇಬ್ಬರು: ಪುತ್ತೂರು ತಾಲೂಕಿನ ಕಬಕ ಗ್ರಾಮದ ವಿದ್ಯಾಪುರ ಮನೆಯ ಅಬ್ದುಲ್ ರಹಮಾನ್(40) ತಲೆಗೆ ಹಾಗೂ ಎಡಕಾಲು ಮುರಿದಿದ್ದು. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ಹಿಟ್ಟಾಡಿ ಮನೆಯ ಅಬ್ದುಲ್ ರಹಮಾನ್ ಪತ್ನಿಯ ತಂಗಿ ನಾಸಿಯಾ(30) ಎಡಕಾಲು ಮುರಿದಿದ್ದು. ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆನೆ ದಾಳಿ ವೇಳೆ ಕಾರಿನದಲ್ಲಿದ್ದವರ ಮಾಹಿತಿ: ಕಾರಿನಲ್ಲಿ ಅಬ್ದುಲ್ ರಹಮಾನ್ (40) ಪತ್ನಿ ಫೌಸಿಯಾ(35) , ನಾಸಿಯಾ ತಾಯಿ ಜುಬೈದಾ (50), ನಾಸಿಯಾ ಚಿಕ್ಕಮ್ಮ ಅಯಿಷಾ (45), ನಾಸಿಯಾ ಮಕ್ಕಳಾದ ಫಾತಿಮಾ ಅಲ್ಫಾ(1) , ಅಯಿಷಾ ವಾಫಾ(4) ,ಅಬ್ದುಲ್ ರಹಮಾನ್ ಮಗಳು ಮಹಮ್ಮದ್ ಮೋಹಜ್(4) ಸೇರಿ ಒಟ್ಟು 7 ಜನರು ಇದ್ದವರು ಎಂದು ಗಾಯಗೊಂಡ ಅಬ್ದುಲ್ ರಹಮಾನ್ ಮಹಾ ಎಕ್ಸ್‌ಪ್ರೆಸ್‌ ವೆಬ್ ಸೈಟ್ ಗೆ ಮಾಹಿತಿ ನೀಡಿದ್ದಾರೆ.

ಘಟನೆಯ ವಿವರ: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಿಂದ ನೆರಿಯ ಪತ್ನಿ ಮನೆಗೆ ಹೋಗಿ ಉಜಿರೆ ಶಾಪಿಂಗ್ ಮುಗಿಸಿಕೊಂಡು ನೆರಿಯ ಪತ್ನಿ ಮನೆಗೆ ಹೋಗುವಾಗ ಒಂಟಿ ಸಲಗ ಕಂಡಿದ್ದು ತಕ್ಷಣ ಕಾರನ್ನು ಬಯಲು ಬಳಿ ನಿಲ್ಲಿಸಿದ್ದು ಆನೆ ಕಾರಿನ ಮೇಲೆ ದಾಳಿ ಮಾಡಿ ಕಾರನ್ನು ಪಲ್ಟಿ ಮಾಡಿದ್ದು ಈ ವೇಳೆ ಕಾರಿನಲ್ಲಿದ್ದವರು ಜರಿದ್ದರಿಂದ ದಂತದಿಂದ ಕಾರಿನ ಡೋರ್ ಮತ್ತು ಚಾಲಕನ ಸೀಟ್ ಸಿಲಿ ಪ್ರಾಣ ಉಳಿದಿದ್ದು ಬಳಿಕ ಆನೆ ವಾಪಸ್ ಹೋಗಿದೆ ಇದರಿಂದ ಇಬ್ಬರ ಕಾಲು ಮುರಿದಿದ್ದು. ಮೂರು ಮಕ್ಕಳು ಯಾವುದೆ ಗಾಯವಾಗದೆ ಒಟ್ಟು ಐದು ಜನ ಪ್ರಾಣಾ ಉಳಿಸಿಕೊಂಡಿದ್ದಾರೆ. ತಕ್ಷಣ ಸಾರ್ವಜನಿಕರು ಸ್ಥಳಕ್ಕೆ ಬಂದು ಗಾಯಗೊಂಡ ಇಬ್ಬರನ್ನು ಕಕ್ಕಿಂಜೆ ಕೃಷ್ಣ ಆಸ್ಪತ್ರೆಗೆ ಸೇರಿಸಿದ್ದಾರೆ. ಇಬ್ಬರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳ್ತಂಗಡಿ ಅರಣ್ಯಾ ಇಲಾಖೆ ತಂಡ ಗಾಯಗೊಂಡವರನ್ನು ಭೇಟಿ ಮಾಡಿ ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿ ಆನೆ ಹೋದ ಸ್ಥಳಕ್ಕೆ ಹೋಗಿ ಮಾಹಿತಿ ಪಡೆದುಕೊಂಡಿದ್ದಾರೆ.

ಒಂಟಿ ಸಲಗ ಬಗ್ಗೆ ಎಚ್ಚರಿಕೆ ನೀಡಿದ ಆರ್.ಎಫ್.ಓ: ಒಂಟಿ ಸಲಗ ನೆರಿಯ ಸುತ್ತಮುತ್ತ ತಿರುಗಾಟ ನಡೆಸುತ್ತಿದ್ದು ಈ ಬಗ್ಗೆ ಸಾರ್ವಜನಿಕರಿಗೆ ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ ಮತ್ತಿ ಸಿಬ್ಬಂದಿ ರಾತ್ರಿ ಹೊತ್ತು ಸಂಚಾರಿಸುವ ಎಚ್ಚರಿಕೆಯಿಂದ ಇರಲು ಸೂಚನೆ ನೀಡಿದ್ದಾರೆ. ಅರಣ್ಯ ಇಲಾಖೆಯ ಇಬ್ಬರು ಸಿಬ್ಬಂದಿಗಳನ್ನು ಒಂಟಿ ಸಲಗದ ಬಗ್ಗೆ ನಿಗಾ ಇಡಲು ನೇಮಿಸಲಾಗಿದೆ ಎಂದು ಅರಣ್ಯಾಧಿಕಾರಿ ಮೋಹನ್ ಕುಮಾರ್ ಮಹಾ ಎಕ್ಸ್ ವೆಬ್ ಸೈಟ್ ಗೆ ಮಾಹಿತಿ ನೀಡಿದ್ದಾರೆ.

ಬೆಳ್ತಂಗಡಿ ಅರಣ್ಯಾಧಿಕಾರಿ ಮೋಹನ್ ಕುಮಾರ್ , ಡಿ.ಆರ್.ಎಫ್.ಓ ಯತೀಂದ್ರ ಮತ್ತು ರಾಜ್ ಶೇಖರ್ , ಅರಣ್ಯ ಗಸ್ತು ಪಾಲಕ ಪಾಂಡುರಂಗ ಕಮತಿ ಮತ್ತು ಅಖಿಲೇಶ್, ಅರಣ್ಯ ಕವಾಲುಗಾರ ಕಿಟ್ಟಣ್ಣ ಮತ್ತು ವಿನಯಚಂದ್ರ ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

- Advertisement -
spot_img

Latest News

error: Content is protected !!