Friday, October 4, 2024
Homeಕರಾವಳಿಮಂಗಳೂರು: ನೈತಿಕ ಪೊಲೀಸ್ ಗಿರಿ ಪ್ರಕರಣ: ಯುವಕ, ಯುವತಿ ಪೊಲೀಸ್ ವಶಕ್ಕೆ

ಮಂಗಳೂರು: ನೈತಿಕ ಪೊಲೀಸ್ ಗಿರಿ ಪ್ರಕರಣ: ಯುವಕ, ಯುವತಿ ಪೊಲೀಸ್ ವಶಕ್ಕೆ

spot_img
- Advertisement -
- Advertisement -

ಮಂಗಳೂರು: ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ಪ್ರಕರಣ ನಡೆದಿದೆ.

ಮೋರ್ಗನ್ಸ್ ಗೇಟ್ ಬಳಿ‌ ಘಟನೆ ನಡೆದಿದ್ದು, ಮಂಕಿ ಸ್ಟಾಂಡ್ ನಿವಾಸಿಯಾಗಿರುವ ಯುವಕನೊಂದಿಗೆ‌ ಚಿಕ್ಕಮಗಳೂರಿನ‌ ಯುವತಿ ಸ್ಕೂಟರ್ ನಲ್ಲಿ ಸುತ್ತಾಡುತ್ತಿದ್ದುದನ್ನು ಗಮನಿಸಿದ ಬಜರಂಗದಳ ಕಾರ್ಯಕರ್ತರು ಬೈಕ್ ನಲ್ಲಿ ಹಿಂಬಾಲಿಸಿದ್ದಾರೆ.

ಬೇರೆ ಬೇರೆ ಕೋಮಿನ ಯುವಕ ಮತ್ತು ಯುವತಿ ಮಂಕಿ‌ ಸ್ಟಾಂಡ್ ನಲ್ಲಿನ ಮಳಿಗೆಯೊಂದರಲ್ಲಿ ಉದ್ಯೋಗದಲ್ಲಿದ್ದು, ಸ್ಕೂಟರ್ ಅಡ್ಡ ಹಾಕಿದ ಬಜರಂಗದಳ ಕಾರ್ಯಕರ್ತರು ಯುವಕ ಮತ್ತು ಯುವತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ನಂತರ ಸ್ಥಳದಲ್ಲಿ ಎರಡು ಕೋಮಿನ‌ ಯುವಕರ ತಂಡ ಜಮಾಯಿಸಿದ್ದು, ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಪಾಂಡೇಶ್ವರ ಠಾಣೆಯ ಪೊಲೀಸರು ಮಧ್ಯ ಪ್ರವೇಶಿಸಿ ಗುಂಪು ಚದುರಿಸಿದ್ದಾರೆ.

ಯುವಕ ಮತ್ತು ಯುವತಿಯನ್ನು ವಶಕ್ಕೆ ಪಡೆದ ಪಾಂಡೇಶ್ವರ ಪೊಲೀಸರು ತನಿಖೆ ನಡೆಸಿದ್ದಾರೆ.

- Advertisement -
spot_img

Latest News

error: Content is protected !!