Monday, June 8, 2026
Homeತಾಜಾ ಸುದ್ದಿಮರ್ದಂಬೈಲು ನಿವಾಸಿ ಹಾಸನದಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವು

ಮರ್ದಂಬೈಲು ನಿವಾಸಿ ಹಾಸನದಲ್ಲಿ ನಡೆದ ಕಾರು ಅಪಘಾತದಲ್ಲಿ ಸಾವು

- Advertisement -
- Advertisement -

ಕುಂಬಳೆ: ಹಾಸನದಲ್ಲಿ ನಡೆದ ಕಾರು ಅಪಘಾತದಲ್ಲಿ ನೀರ್ಚಾಲು ಕಲ್ಲಕಟ್ಟ ಮರ್ದಂಬೈಲು ದಿ| ರಾಜೀವ ಅವರ ಪುತ್ರ ಆದರ್ಶ್ (26) ಸಾವನ್ನಪ್ಪಿದ್ದಾರೆ.

ಆದರ್ಶ್‌ ಸ್ನೇಹಿತನ ಮದುವೆಗೆಂದು ಬೇಲೂರಿಗೆ ಹೋಗಿ ವಾಪಾಸ್ಸಾಗುವಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಗಂಭೀರ ಗಾಯಗೊಂಡ ಆದರ್ಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೃತ ಆದರ್ಶ ತಾಯಿ, ಸಹೋದರ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.

- Advertisement -

Latest News

error: Content is protected !!