Saturday, May 18, 2024
Homeತಾಜಾ ಸುದ್ದಿಡ್ಯಾನ್ಸ್‌ ಶೋವೊಂದರಲ್ಲಿ ಯಕ್ಷಗಾನಕ್ಕೆ ಅವಮಾನ: ಕ್ಷಮೆ ಕೇಳಿದ ಖಾಸಗಿ ವಾಹಿನಿ

ಡ್ಯಾನ್ಸ್‌ ಶೋವೊಂದರಲ್ಲಿ ಯಕ್ಷಗಾನಕ್ಕೆ ಅವಮಾನ: ಕ್ಷಮೆ ಕೇಳಿದ ಖಾಸಗಿ ವಾಹಿನಿ

spot_img
- Advertisement -
- Advertisement -

ಖಾಸಗೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋ ಸೀಸನ್‌6ರಲ್ಲಿ ಇದೇ 23 ಮತ್ತು 24 ಜುಲೈ ಪ್ರಸಾರವಾದ ಎಪಿಸೋಡ್‌ನಲ್ಲಿ ತಂಡವೊಂದು ಯಕ್ಷಗಾನ ಕುರಿತು ಹಾಸ್ಯಮಯವಾಗಿ ನೃತ್ಯ ಪ್ರದರ್ಶನ ಮಾಡಿದ್ದಾರೆ. ಸೂಪರ್ ಡೂಪರ್ ನೃತ್ಯ ಎಂದು ಶಿವಣ್ಣ ಅವರಿಂದ ಸ್ಟ್ಯಾಂಡಿಂಗ್ ಒವೇಷನ್‌ ಮತ್ತು ಗೋಲ್ಡನ್ ಹ್ಯಾಟ್‌ ಆಂಡ್ ಫಯರ್‌ ಬ್ರ್ಯಾಂಡ್‌ ಪಡೆದುಕೊಂಡಿದ್ದಾರೆ. ಆದ್ರೆ ನೃತ್ಯ- ಹಾಸ್ಯ- ಯಕ್ಷಗಾನ, ಈ ಮೂರನ್ನು ಒಂದರಲ್ಲಿ ತೋರಿಸಿರುವುದು ತಪ್ಪು. ಯಕ್ಷಗಾನಕ್ಕೆ ಬೆಲೆ ಕೊಡ ಬೇಕು ವಾಹಿನಿ ಮತ್ತು ತಂಡ ಕ್ಷಮೆ ಕೇಳಬೇಕು ಎಂದು ನೆಟ್ಟಿಗರು ಅಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಖಾಸಗೀ ವಾಹಿನಿಯು ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ವೇದಿಕೆಯ ಮೂಲಕ ಅನೇಕ ಕಲಾ ಪ್ರಕಾರಗಳನ್ನು ಗೌರವಿಸುತ್ತ, ನಾಡಿನ ಜನತೆಗೆ ಪರಿಚಯಿಸುತ್ತಲೇ ಬಂದಿದೆ. ನಮ್ಮ ವೇದಿಕೆಯಲ್ಲಿ ಯಕ್ಷಗಾನಕ್ಕೂ ಸಹ ಪ್ರಾಮುಖ್ಯತೆ ನೀಡಿದ್ದು, ನೃತ್ಯಾಭಿಮಾನಿಗಳ ಪ್ರಶಂಸೆ ಪಡೆದಿದ್ದೇವೆ. ಆದರೆ ಕಳೆದ ವಾರ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ಕಾರ್ಯಕ್ರಮದಲ್ಲಿ ಪ್ರಸಾರವಾದ ಯಕ್ಷಗಾನ ಕೆಲವರ ಭಾವನೆಗಳಿಗೆ ಧಕ್ಕೆಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಾಗಿ ಆಗಿದ್ದಲ್ಲವೆಂದು ವಾಹಿನಿ ಸ್ಪಷ್ಟೀಕರಿಸಲು ಬಯಸುತ್ತದೆ ಮತ್ತು ಈ ಮೂಲಕ ಕ್ಷಮೆಯಾಚಿಸುತ್ತೇವೆ. ನಮ್ಮ ಅತ್ಯತ್ತಮ ಕೆಲಸಗಳಿಗೆ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ಸಹ ನಾವು ಸ್ವಾಗತಿಸುತ್ತೇವೆ. ಇಲ್ಲಿವರೆಗೂ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೆಯೇ ಮುಂದುವರಿಯಲಿ ಎಂದು ಜೀ ಕನ್ನಡ ವಾಹಿನಿ ಆಶಿಸುತ್ತದೆ’ ಎಂದು ಪತ್ರದ ಮೂಲಕ ಕ್ಷಮೆ ಕೇಳಿದ್ದಾರೆ.

- Advertisement -
spot_img

Latest News

error: Content is protected !!