Tuesday, July 8, 2025
Homeಕರಾವಳಿಸುಬ್ರಹ್ಮಣ್ಯ: ಬೈಕ್ ಮೇಲೆ ಹಾರಿದ ಕಡವೆ; ಹವ್ಯಾಸಿ ಭಾಗವತರ ಸಾವು!

ಸುಬ್ರಹ್ಮಣ್ಯ: ಬೈಕ್ ಮೇಲೆ ಹಾರಿದ ಕಡವೆ; ಹವ್ಯಾಸಿ ಭಾಗವತರ ಸಾವು!

spot_img
- Advertisement -
- Advertisement -

ಸುಬ್ರಹ್ಮಣ್ಯ: ಹವ್ಯಾಸಿ ಭಾಗವತರೊಬ್ಬರು ಬೈಕಿನಲ್ಲಿ ತೆರಳುತ್ತಿದ್ದ ವೇಳೆ ಬೈಕಿನ ಮೇಲೆ ಕಡವೆ ಹಾರಿದ ಪರಿಣಾಮವಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಲ್ಕುಂದದ ಬ್ರಾಮರಿ‌ ನೆಸ್ಟ್ ವಸತಿಗೃಹದ ಬಳಿ ನಡೆದಿದೆ.

ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ ಕಛೇರಿ ಸಿಬ್ಬಂದಿ, ಹವ್ಯಾಸಿ ಭಾಗವತ, ಕೀ ಬೋರ್ಡ್ ವಾದಕ ರಾಮಚಂದ್ರ ಅರ್ಬಿತ್ತಾಯ (53) ಮೃತಪಟ್ಟ ದುರ್ದೈವಿ.

ಇವರು ಶನಿವಾರ ಮುಂಜಾನೆ ಸುಮಾರು 5.45ರ ವೇಳೆಗೆ ತಮ್ಮ ಸಹೋದರನೊಂದಿಗೆ ಕುಲ್ಕುಂದಕ್ಕೆ ಶಟಲ್ ಬ್ಯಾಡ್ಮಿಂಟನ್ ಆಟ ಆಡಲು ತೆರಳುತ್ತಿರುವ ಸಂದರ್ಭ ಈ ಘಟನೆ ನಡೆದಿದೆ. ಕುಲ್ಕುಂದದ ಬಳಿ ಅವರು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಪಕ್ಕದ ಗುಡ್ಡದಿಂದ ಕಡವೆ ಹಾರಿದ್ದು, ಇದರ ಪರಿಣಾಮವಾಗಿ ಅರ್ಬಿತ್ತಾಯರ ಕುತ್ತಿಗೆಯ ಭಾಗಕ್ಕೆ ಬಲವಾದ ಏಟು ಬಿದ್ದು ಬೈಕ್ ಪಲ್ಟಿಯಾಯಿತು. ರಾಮಚಂದ್ರರು ಸ್ಥಳದಲ್ಲೆ ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.

ಸುಮಾರು 16 ವರ್ಷಗಳಿಂದ ಸುಬ್ರಹ್ಮಣ್ಯದ ಅನುಗ್ರಹ ಎಜ್ಯುಕೇಶನ್ ಟ್ರಸ್ಟ್ ನ ಆಶ್ರಯದಲ್ಲಿರುವ ಕುಮಾರಸ್ವಾಮಿ ವಿದ್ಯಾಲಯದಲ್ಲಿ ಕಛೇರಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದರು. ಅವಿವಾಹಿತರಾಗಿರುವ ಅವರು, ತಾಯಿ, ಸಹೋದರ, ಸಹೋದರಿಯನ್ನು ಅಗಲಿದ್ದಾರೆ.


- Advertisement -
spot_img

Latest News

error: Content is protected !!