Monday, June 8, 2026
Homeತಾಜಾ ಸುದ್ದಿಪುತ್ತೂರು: ರಬ್ಬರ್ ಹಾಲಿಗೆ ಮಿಕ್ಸ್ ಮಾಡಲೆಂದು ತಂದಿರಿಸಿದ್ದ ಆಸಿಡ್ ಸೇವಿಸಿ ವ್ಯಕ್ತಿ ಸಾವು

ಪುತ್ತೂರು: ರಬ್ಬರ್ ಹಾಲಿಗೆ ಮಿಕ್ಸ್ ಮಾಡಲೆಂದು ತಂದಿರಿಸಿದ್ದ ಆಸಿಡ್ ಸೇವಿಸಿ ವ್ಯಕ್ತಿ ಸಾವು

- Advertisement -
- Advertisement -

ಪುತ್ತೂರು: ಆಸಿಡ್ ಸೇವಿಸಿ ವ್ಯಕ್ತಿಯೋರ್ವರು ಸಾವನ್ನಪ್ಪಿದ ಘಟನೆ ಪುತ್ತೂರಿನಲ್ಲಿ ನಡೆದಿದೆ. ಮೃತರನ್ನು ಬಡಗನ್ನೂರು ಗ್ರಾಮದ ಸಂಪಿಗೆಮಜಲು ನಿವಾಸಿ ವೆಂಕಪ್ಪ ಗೌಡ ಎಂದು ಗುರುತಿಸಲಾಗಿದೆ.

ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಇವರು ಜ.10ರಂದು ರಬ್ಬರ್ ಹಾಲಿಗೆ ಮಿಕ್ಸ್ ಮಾಡಲೆಂದು ತಂದಿರಿಸಿದ್ದ ಆಸಿಡ್ ಅನ್ನು ಸೇವಿಸಿದ್ದು, ಇದನ್ನು ಗಮನಿಸಿದ ಪತ್ನಿ ಹೇಮಲತಾ ಮತ್ತು ಮನೆ ಮಂದಿ ತಕ್ಷಣವೇ ವೆಂಕಪ್ಪ ಗೌಡರನ್ನು ಪುತ್ತೂರು ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟಿದ್ದಾರೆ. ಈ ಕುರಿತು ಮೃತರ ಪುತ್ರಿ ಸುಷ್ಮಾ ಅವರು ನೀಡಿದ ದೂರಿನಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!