Saturday, June 6, 2026
Homeಇತರಪುತ್ತೂರು: ಆಕಸ್ಮಿಕವಾಗಿ ಕೆರೆಗೆ ಬಿದ್ದು ವೃದ್ದೆ ಸಾವು...!

ಪುತ್ತೂರು: ಆಕಸ್ಮಿಕವಾಗಿ ಕೆರೆಗೆ ಬಿದ್ದು ವೃದ್ದೆ ಸಾವು…!

- Advertisement -
- Advertisement -

ಪುತ್ತೂರು: ವೃದ್ಧೆಯೊಬ್ಬರು ಆಕಸ್ಮಿಕವಾಗಿ ಮನೆಯ ತೋಟದ ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಅರಿಯಡ್ಕ ಗ್ರಾಮದ ಕುರಿಂಜ ಬಲಿಪ್ಪಕೊಚ್ಚಿ ಎಂಬಲ್ಲಿ ಅ.29ರಂದು ನಡೆದಿದೆ.

ಬಲಿಪ್ಪಕೊಚ್ಚಿ, ದಿ.ಲಕ್ಷ್ಮಣ ಅವರ ಪತ್ನಿ ಸುಮಾರು 73 ವರ್ಷ ಪ್ರಾಯದ ಚಂದ್ರಬಾಗಿ ಮೃತಪಟ್ಟವರು. ಅವರು ಆ.28ರಂದು ರಾತ್ರಿ ಮನೆಯಲ್ಲಿ ಮಲಗಿದವರು ಬೆಳಿಗ್ಗೆ ನಾಪತ್ತೆಯಾಗಿದ್ದರು. ಬಳಿಕ ಮನೆಮಂದಿ ಹುಡುಕಾಡಿದಾಗ ತೋಟದ ಕರೆಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.

ಮೃತರ ಪುತ್ರ ನಾರಾಯಣ ಅವರು ನೀಡಿದ ದೂರಿನಂತೆ ಸಂಪ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -

Latest News

error: Content is protected !!