Wednesday, June 3, 2026
Homeಅಪರಾಧಅನ್ಯಕೋಮಿನ ಯುವಕನೋರ್ವ ಹಿಂದೂ ಎಂದು ನಂಬಿಸಿ ಯುವತಿಗೆ ವಂಚನೆ...! ಆರೋಪಿ ಪೊಲೀಸ್ ವಶಕ್ಕೆ...!

ಅನ್ಯಕೋಮಿನ ಯುವಕನೋರ್ವ ಹಿಂದೂ ಎಂದು ನಂಬಿಸಿ ಯುವತಿಗೆ ವಂಚನೆ…! ಆರೋಪಿ ಪೊಲೀಸ್ ವಶಕ್ಕೆ…!

- Advertisement -
- Advertisement -

ಸುಳ್ಯ: ಅನ್ಯಕೋಮಿನ ಯುವಕನೋರ್ವ ಹಿಂದೂ ಯುವತಿಗೆ ತಾನು ಹಿಂದೂ ಯುವಕನೆಂದು ಸುಳ್ಳು ಹೇಳಿ ಯುವತಿಯನ್ನು ನಂಬಿಸಿದ ವಂಚಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ. ಬಂಧಿತ ಆರೋಪಿಯ ಹೆಸರು ತಸ್ಲೀಮ್, ಮೂಲತಃ ಮಡಿಕೇರಿಯವನಾಗಿದ್ದು ಎಂಜಿನಿಯರಿಂಗ್ ವಿದ್ಯಾರ್ಥಿ ಎನ್ನಲಾಗಿದೆ. ಯುವತಿ ನೀಡಿದ ದೂರಿನ್ವಯ ಯುವಕನನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎರಡು ತಿಂಗಳ ಹಿಂದೆ ಜಾಲತಾಣದಲ್ಲಿ ಪರಿಚಯವಾಗಿದ್ದ ಯುವಕ ತನ್ನ ಹೆಸರು ಕೌಶಲ್ ಎಂದು ಹೇಳಿಕೊಂಡಿದ್ದ. ನ 11ರಂದು ಆತ ನನ್ನನ್ನು ಸುಳ್ಯಕ್ಕೆ ಕರೆಯಿಸಿ ಅಲ್ಲಿಂದ ಬೈಕ್ ಮೂಲಕ ಮಡಿಕೇರಿಗೆ ಕರೆದುಕೊಂಡು ಹೋಗಿ ಅನುಚಿತವಾಗಿ ವರ್ತಿಸಿ ನಾನು ಹಿಂದೂ ಅಲ್ಲ ಮುಸ್ಲಿಂ ಎಂದು ಹೇಳಿ ಕೊಲೆ ಬೆದರಿಕೆ ಒಡ್ಡಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಲಾಗಿದೆ.

- Advertisement -

Latest News

error: Content is protected !!