Thursday, June 4, 2026
Homeತಾಜಾ ಸುದ್ದಿ2ನೇ ಮಗುವಿಗೆ ಹೊಡೆದ ಎಂದು 6 ವರ್ಷದ ಹಿರಿಯ ಪುತ್ರನನ್ನು ಹೊಡೆದುಕೊಂದ ತಾಯಿ!…

2ನೇ ಮಗುವಿಗೆ ಹೊಡೆದ ಎಂದು 6 ವರ್ಷದ ಹಿರಿಯ ಪುತ್ರನನ್ನು ಹೊಡೆದುಕೊಂದ ತಾಯಿ!…

- Advertisement -
- Advertisement -

ಬೆಂಗಳೂರು:ಇಲ್ಲಿನ ಪಟ್ಟಣಗೆರೆಯಲ್ಲಿ ಎರಡು ತಿಂಗಳ ತನ್ನ 2ನೇ ಮಗುವಿಗೆ ಹೊಡೆಯುತ್ತಿದ್ದಕ್ಕೆ ಕೋಪಗೊಂಡ ತಾಯಿ, 6 ವರ್ಷದ ಹಿರಿಯ ಪುತ್ರನನ್ನು ಹತ್ಯೆಗೈದಿರುವ ಹೃದಯ ವಿದ್ರಾವಕ ಘಟನೆ ವರದಿಯಾಗಿದೆ.

ಮನೀಶ್‌ (6) ಮೃತ ಬಾಲಕ. ಈತ ಪಟ್ಟಣಗೆರೆ ನಿವಾಸಿ ತೇಜ್‌ರಾಮ್‌, ದೇವಿ ಅವರ ಪುತ್ರ. ಮಗುವಿನ ತಾಯಿ ದೇವಿ(26) ಬಾಲಕನನ್ನು ಕೊಂಧಿದ್ದು ಆಕೆಯನ್ನು ಬಂಧಿಸಲಾಗಿದೆ. ಈ ಹಿಂದೆಯೂ ದೇವಿ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದರು. ಆಗ ಮಾನಸಿಕ ಖಿನ್ನತೆಗೆ ಸಂಬಂಧಿಸಿದಂತೆ ಚಿಕಿತ್ಸೆ ಕೊಡಿಸಲಾಗಿತ್ತು. ಮೇಲ್ನೋಟಕ್ಕೆ ಈಕೆ ಮಾನಸಿಕ ಅಸ್ವಸ್ಥೆಯಂತೆ ತೋರುತ್ತಿದ್ದು ವೈದ್ಯಕೀಯ ತಪಾಸಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

Latest News

error: Content is protected !!