Tuesday, May 7, 2024
Homeತಾಜಾ ಸುದ್ದಿಸಾಲ ನೀಡುವಂತೆ ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ: ಸಾಲ ನೀಡಲು ನಿರಾಕರಿಸಿದ್ದಕ್ಕೆ ಲೂಟಿ ಮಾಡೋದಾಗಿ...

ಸಾಲ ನೀಡುವಂತೆ ಬ್ಯಾಂಕ್‍ಗೆ ರೈಫಲ್ ಹಿಡಿದು ನುಗ್ಗಿದ ಸನ್ಯಾಸಿ: ಸಾಲ ನೀಡಲು ನಿರಾಕರಿಸಿದ್ದಕ್ಕೆ ಲೂಟಿ ಮಾಡೋದಾಗಿ ಬೆದರಿಕೆ

spot_img
- Advertisement -
- Advertisement -

ತಮಿಳುನಾಡು: ಚೀನಾದಲ್ಲಿ ವೈದ್ಯಕೀಯ ಪದವಿ ಓದುತ್ತಿರುವ ತನ್ನ ಮಗಳಿಗೆ ಸಾಲ ನೀಡುವಂತೆ ಕೇಳಲು ರೈಫಲ್‌ ಹಿಡಿದು ಸನ್ಯಾಸಿಯೋರ್ವ ಬ್ಯಾಂಕ್‍ಗೆ ನುಗ್ಗಿದ್ದಾನೆ. ಈ ವೇಳೆ ಸಾಲ ನೀಡಲು ನಿರಾಕರಿಸಿದ್ದಕ್ಕೆ ಬ್ಯಾಂಕ್ ಲೂಟಿ ಮಾಡುವುದಾಗಿ ಬೆದರಿಕೆಯೊಡ್ಡಿರುವ ಘಟನೆ ತಮಿಳುನಾಡಿನ ತಿರುವಾರೂರಿನಲ್ಲಿ ನಡೆದಿದೆ.

ಸನ್ಯಾಸಿಯನ್ನು ತಿರುಮಲೈ ಸಾಮಿ ಎಂದು ಗುರುತಿಸಲಾಗಿದ್ದು. ಸಾಲ ಕೇಳಲು ಬಂದ ಈತನಿಗೆ ಬ್ಯಾಂಕ್ ಅಧಿಕಾರಿಗಳು ಆಸ್ತಿ ದಾಖಲೆ ನೀಡುವಂತೆ ಕೇಳಿದ್ದು, ಇದಕ್ಕೆ ತಿರುಮಲೈ ಮನೆಗೆ ಹೋಗಿ ತನ್ನ ರೈಫಲ್ ತೆಗೆದುಕೊಂಡು ಬ್ಯಾಂಕಿಗೆ ಹಿಂತಿರುಗಿದನು. ಬಳಿಕ ಕುರ್ಚಿ ಮೇಲೆ ಕುಳಿತುಕೊಂಡು ಧೂಮಪಾನ ಮಾಡಲು ಆರಂಭಿಸಿದಲ್ಲದೇ ಬ್ಯಾಂಕ್ ಸಿಬ್ಬಂದಿಗೆ ಬೆದರಿಕೆಯೊಡ್ಡಿದ್ದಾನೆ. ಜೊತೆಗೆ ಫೇಸ್‍ಬುಕ್‍ನಲ್ಲಿ ಲೈವ್‌  ಬಂದು ಸಾಲ ನೀಡಲು ನಿರಾಕರಿಸಿದ್ದಕ್ಕೆ ಬ್ಯಾಂಕ್ ಲೂಟಿ ಮಾಡುತ್ತಿದ್ದೇನೆ ಎಂದು ಹೇಳಿದ್ದಾನೆ. ಮಾಹಿತಿ ದೊರೆತ ಪೊಲೀಸರು ಬ್ಯಾಂಕ್‍ಗೆ ಆಗಮಿಸಿ ಸನ್ಯಾಸಿಯನ್ನು ಬಂಧಿಸಿ, ತನಿಖೆ ಆರಂಭಿಸಿದ್ದಾರೆ.

- Advertisement -
spot_img

Latest News

error: Content is protected !!