- Advertisement -
- Advertisement -
ಕಾಸರಗೋಡು : ವಿದ್ಯುತ್ ಶಾಕ್ ತಗುಲಿ ಎಂಟು ವರ್ಷದ ಬಾಲಕ ಸಾವನಪ್ಪಿದ ಘಟನೆ ಮಂಗಳವಾರ ವರ್ಕಾಡಿ ಸಮೀಪದ ಮೊರತ್ತನೆಯಲ್ಲಿ ನಡೆದಿದೆ.
ಮೊರತ್ತನೆಯ ಆಟೋ ರಿಕ್ಷಾ ಚಾಲಕ ಸದಾಶಿವ ಶೆಟ್ಟಿ ರವರ ಪುತ್ರ ಮೋಕ್ಷಿತ್ ರಾಜ್ ಶೆಟ್ಟಿ ಈ ಘಟನೆಯಲ್ಲಿಮೃತ ಪಟ್ಟ ಬಾಲಕ. ಈತ ತಲೆಕ್ಕಲ ಎಲ್.ಪಿ ಶಾಲೆಯ ವಿದ್ಯಾರ್ಥಿ.
ಮಂಗಳವಾರ ಸಂಜೆ ಮನೆ ಸಮೀಪ ನಿರ್ಮಾಣ ಹಂತದಲ್ಲಿರುವ ಇನ್ನೊಂದು ಮನೆಯ ಟೆರೇಸ್ ಗೆ
ತೆರಳಿದ್ದ ಸಂದರ್ಭದಲ್ಲಿ ಮನೆಯ ಮೇಲ್ಭಾಗ ದಲ್ಲಿ ಹಾದು ಹೋಗುತ್ತಿದ್ದ ವಿದ್ಯುತ್ ಲೈನ್ ತಾಗಿ ಈ ದುರಂತ ನಡೆದಿದೆ. ಮನೆಯಿಂದ ಆಟವಾಡಲು ಹೋಗಿದ್ದ ಬಾಲಕ ತಡವಾದರೂ ಮನೆಗೆ ಬಾರದಿದ್ದುದರಿಂದ ಮನೆಯವರು ಶೋಧ ನಡೆಸಿದಾಗ ನಿರ್ಮಾಣ ಹಂತದ ಮನೆಯ ಟೆರೇಸ್ ನಲ್ಲಿ ವಿದ್ಯುತ್ ಶಾಕ್ ತಗುಲಿ ಬಿದ್ದಿರುವುದು ಕಂಡು ಬಂದಿದೆ. ಮೃತ ದೇಹವನ್ನು ಮಂಗಲ್ಪಾಡಿ ಯಲ್ಲಿರುವ ತಾಲೂಕು ಆಸ್ಪತ್ರೆ ಯ ಶವಾಗಾರದಲ್ಲಿರಿಸಲಾಗಿದೆ.
- Advertisement -