Saturday, June 6, 2026
Homeಕರಾವಳಿಕೊಡಿಕ್ಕಲ್ : ಕೈಯಲ್ಲಿ ಮರದ ತುಂಡನ್ನು ಹಿಡಿದುಕೊಂಡು ಬಂದು ಎರಡು ವಾಹನಕ್ಕೆ ಹಾನಿ ಮಾಡಿದ ವ್ಯಕ್ತಿಯನ್ನು...

ಕೊಡಿಕ್ಕಲ್ : ಕೈಯಲ್ಲಿ ಮರದ ತುಂಡನ್ನು ಹಿಡಿದುಕೊಂಡು ಬಂದು ಎರಡು ವಾಹನಕ್ಕೆ ಹಾನಿ ಮಾಡಿದ ವ್ಯಕ್ತಿಯನ್ನು ಸೆರೆ ಹಿಡಿದ ಹಿಂದೂ ಕಾರ್ಯಕರ್ತರು..!

- Advertisement -
- Advertisement -

ಮಂಗಳೂರು: ಇತ್ತೀಚಿಗೆ ಕೋಡಿಕಲ್ ಪರಿಸರದಲ್ಲಿ ನಾಗಬನ ಅಪವಿತ್ರ ಹಾಗೆ ದೈವದ ಸೊತ್ತುಗಳ ಕಳ್ಳತನ ಪ್ರಕರಣ ನಡೆದಿರುವುದರಿಂದ ಸ್ವತಃ ಸಂಘಟನೆ ಕಾರ್ಯಕರ್ತರೆ ಪಹರೆ ನಡೆಸುವಂತಹ ಪ್ರಸಂಗ ಎದುರಾಗಿದೆ.

ಈ ನಿಟ್ಟಿನಲ್ಲಿ ರಾಮ್ ಸೇನಾ, ಅಗಸ್ತ್ಯ ಘಟಕ, ಉರ್ವಸ್ಟೋರ್ ಕಾರ್ಯಕರ್ತರು ಕೋಡಿಕಲ್ ಪರಿಸರದಲ್ಲಿ ರಾತ್ರಿ ಪಹರೆ ಕಾಯುತ್ತಿದ್ದ ಸಂದರ್ಭದಲ್ಲಿ ಸುಮಾರು 1.30 ಗಂಟೆಯ ಆಸುಪಾಸು ಕೋಡಿಕಲ್ ಪರಿಸರದಲ್ಲಿ 2 ವಾಹನಗಳನ್ನು ಜಕಮ್ ಗೊಳಿಸಿ ಕೈಯಲ್ಲಿ ಮರದ ತುಂಡನ್ನು ಹಿಡಿದುಕೊಂಡ ಬಂದು ಎರಡು ವಾಹನಕ್ಕೆ ಹಾನಿ ಮಾಡಿದ ಒಬ್ಬ ವ್ಯಕ್ತಿಯು ಹಿಂದೂ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದಿರುತ್ತಾನೆ.

ಇವನನ್ನು ಅಗಸ್ತ್ಯ ಘಟಕದ ಕಾರ್ಯಕರ್ತರು ಪೊಲೀಸ್ ಠಾಣೆಗೆ ಒಪ್ಪಿಸಿರುತ್ತಾರೆ. ಪೋಲೀಸರ ವಿಚಾರಣೆಯ ಮೇರೆಗೆ ವ್ಯಕ್ತಿಯು ತನ್ನ ಹೆಸರು ಅಬ್ದುಲ್ ನಿಸಾರ್ ಹಾಗೂ ಊರು ಕೊಯಿಕ್ಕೊಡ್, ಕೇರಳ ಎಂದು ಹೇಳಿರುತ್ತಾನೆ.

ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಸೇನಾ ಜಿಲ್ಲಾ ಅಧ್ಯಕ್ಷರಾದ ಕಿರಣ್ ಅಮೀನ್ ಉರ್ವಸ್ಟೋರ್ ಅವರು “ಇತ್ತೀಚಿನ ದಿನಗಳಲ್ಲಿ ನಮ್ಮ ಹಿಂದೂ ಧಾರ್ಮಿಕ ಕ್ಷೇತ್ರಗಳ್ಳನ್ನು ಅಪವಿತ್ರ ಗೊಳಿಸುವಂತಹ ಬಹಳಷ್ಟು ಪ್ರಸಂಗಗಳು ಕಂಡು ಬರ್ತಾ ಇವೆ, ಈ ನಿಟ್ಟಿನಲ್ಲಿ ನಮ್ಮ ಶ್ರದ್ದಾ ಕೇಂದ್ರಗಳನ್ನು ನಾವೇ ರಕ್ಷಿಸಿ ಕೊಳ್ಳಬೇಕಾದ ಪರಿಸ್ಥಿತಿ ಎದುರಗಿದೆ, ಮಸೀದಿ ಗಳ ಮುಂದೆ ಪಹರೆಗೆ ಪೊಲೀಸ್ರನ್ನು ನೇಮಿಸುವ ಸರಕಾರಕ್ಕೆ ದೇವಸ್ಥಾನ, ದೈವಸ್ಥಾನ ಹಾಗೂ ನಾಗಬನಗಳ ಬಗ್ಗೆ ಯಾಕಿಂತ ಅಸಡ್ಡೆ ಎಂದು ಪ್ರಶ್ನಿಸಿದರು” ಹಾಗೆಯೇ ಪ್ರತಿಯೊಂದು ಹಿಂದೂ ಶ್ರದ್ದಾ ಕೇಂದ್ರಗಳ ಮುಂದೆ ರಕ್ಷಣೆಗೆ ಪೊಲೀಸ್ ಅನ್ನು ನಿಯೋಜಿಸಬೇಕೆಂದು ಜಿಲ್ಲಾಡಳಿತವನ್ನು ಆಗ್ರಹಿಸಿದರು.

- Advertisement -

Latest News

error: Content is protected !!