Thursday, March 28, 2024
Homeತಾಜಾ ಸುದ್ದಿಮಂಗಳೂರಿನಲ್ಲಿ ಒಂದೇ ಮಳೆಗೆ ₹5 ಕೋಟಿ ನಷ್ಟ: ನಗರದಲ್ಲಿ ಒಂದೇ ದಿನಕ್ಕೆ ಎರಡು ಪಟ್ಟು ಮಳೆಯ...

ಮಂಗಳೂರಿನಲ್ಲಿ ಒಂದೇ ಮಳೆಗೆ ₹5 ಕೋಟಿ ನಷ್ಟ: ನಗರದಲ್ಲಿ ಒಂದೇ ದಿನಕ್ಕೆ ಎರಡು ಪಟ್ಟು ಮಳೆಯ ಅಬ್ಬರ: ಕೈಗಾರಿಕೆಗಳಿಗೂ ನುಗ್ಗಿದ ನೀರು

spot_img
- Advertisement -
- Advertisement -

ಮಂಗಳೂರು: ಕರಾವಳಿಯಲ್ಲಿ ಗುರುವಾರ ಸುರಿದ ಅಬ್ಬರದ ಮಳೆಗೆ ಸುಮಾರು 5 ಕೋಟಿಗೂ ಅಧಿಕ ನಷ್ಟ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ದಕ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮಳೆ ಹಾನಿಯ ಲೆಕ್ಕಾಚಾರದಲ್ಲಿ ತೊಡಗಿದ್ದು, ಪೂರ್ಣ ಪ್ರಮಾಣದ ನಷ್ಟದ ಪ್ರಮಾಣ ಸಿಗಲು ಇನ್ನಷ್ಟು ಸಮಯ ಬೇಕಿದೆ.

ಕರಾವಳಿಗೆ ಮುಂಗಾರು ಪ್ರವೇಶಿಸಿ ತಿಂಗಳಾದರೂ ಮಳೆಯ ಅಬ್ಬರ ಇರಲಿಲ್ಲ. ಆದರೆ ಜೂನ್‌ ಅಂತ್ಯಕ್ಕೆ ಮಳೆಯ ಅಬ್ಬರ ಕಾಣಿಸಿಕೊಂಡ ಪರಿಣಾಮ ಜಿಲ್ಲೆಯ ಬಹುತೇಕ ಕಡೆ ಹಾನಿಯೇ ಹೆಚ್ಚಾಗಿದೆ. ಬೈಕಂಪಾಡಿ ಕೈಗಾರಿಕಾ ಪ್ರಾಂಗಣದ ತಗ್ಗು ಪ್ರದೇಶದಲ್ಲಂತೂ ಮಳೆ ನೀರಿನಿಂದ ಕೈಗಾರಿಕೆಗಳೊಳಗೆ ನೀರು ಪ್ರವೇಶಿಸಿದ್ದು, ಜಿಲ್ಲೆಯಲ್ಲೇ ಹೆಚ್ಚು ಹಾನಿಯಾಗಿದೆ ಎಂದು ಕೈಗಾರಿಕೋದ್ಯಮಿಗಳು ತಿಳಿಸಿದ್ದಾರೆ.

ಗುರುವಾರ ಸುರಿದ ಮಳೆಗೆ ಮಂಗಳೂರು ನಗರ, ಗ್ರಾಮಾಂತರ ಭಾಗದಲ್ಲಿ ಹೆಚ್ಚು ಹಾನಿಯಾಗಿದೆ. ಜಿಲ್ಲೆಯಲ್ಲಿ 77 ಮನೆಗಳಿಗೆ ಭಾಗಶಃ ಹಾನಿಯಾದರೆ, 11 ಮನೆಗಳಿಗೆ ಪೂರ್ಣ ಪ್ರಮಾಣದ ಹಾನಿಯಾಗಿವೆ. ಮಂಗಳೂರು ನಗರ ವ್ಯಾಪ್ತಿಯೊಳಗೆ ಸುಮಾರು 7 ಮನೆಗಳಿಗೆ ಪೂರ್ಣ ಹಾನಿಯಾದರೆ, 42 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಉಳ್ಳಾಲ ಭಾಗದಲ್ಲಿ 22 ಮನೆಗಳಿಗೆ ಭಾಗಶಃ ಹಾನಿಯಾದರೆ ಮೂರು ಮನೆಗಳು ಪೂರ್ಣ ಹಾನಿಗೆ ಗುರಿಯಾಗಿದೆ. ಇದರ ಜತೆಯಲ್ಲಿ 38 ವಿದ್ಯುತ್‌ ಕಂಬಗಳು, 3 ಟ್ರಾನ್ಸ್‌ಫರ್‌ ಕಂಬಗಳು, 0.88ರಷ್ಟು ವಿದ್ಯುತ್‌ ವಯರ್‌ಗಳು, 0.65ರಷ್ಟು ಕಚ್ಚಾ ರಸ್ತೆಗಳು ಹಾನಿಗೆ ಗುರಿಯಾಗಿದೆ. ಇವುಗಳ ನಷ್ಟದ ಲೆಕ್ಕಾಚಾರದಲ್ಲಿಯೇ ಒಂದೂವರೆಯಿಂದ ಎರಡು ಕೋಟಿಯಷ್ಟು ನಷ್ಟ ಸಂಭವಿಸಿದೆ ಎನ್ನುತ್ತಾರೆ ತಜ್ಞರು

ಕರಾವಳಿಯಲ್ಲಿ ಗುರುವಾರ ಒಂದೇ ದಿನ ಸುರಿದ ಮಳೆ ಸಾಮಾನ್ಯ ಮಳೆಗಿಂತ ಎರಡು ಪಟ್ಟು ಜಾಸ್ತಿ ಇತ್ತು ಎನ್ನುವುದು ಐಎಂಡಿ ಮಾಹಿತಿ. ಸಾಮಾನ್ಯವಾಗಿ ಈ ಸಮಯದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ 44.1 ಮಿ.ಮೀ ಮಳೆಯಾಗಿತ್ತು. ಈ ವರ್ಷ ಅದೇ ದಿನಕ್ಕೆ 85.1 ಮಿ.ಮೀ. ಮಳೆಯಾಗಿದೆ. ಎಂದರೆ ಎರಡು ಪಟ್ಟು ಹೆಚ್ಚು ಮಳೆ ಸುರಿದ ಪರಿಣಾಮ ಹಾನಿಗಳೂ ಹೆಚ್ಚಾಗಿವೆ. ಮಂಗಳೂರು ವ್ಯಾಪ್ತಿಯಲ್ಲಿ 108.9 ಮಿ.ಮೀ., ಬಂಟ್ವಾಳದಲ್ಲಿ 108.9 ಮಿ.ಮೀ. ಅತೀ ಹೆಚ್ಚು ಮಳೆಯಾಗಿದೆ.
ಕರಾವಳಿಯಲ್ಲಿ ಅಬ್ಬರದ ಮಳೆಗೆ ಹೆಚ್ಚು ಹಾನಿಯಾದ ಭಾಗ ಬೈಕಂಪಾಡಿ ಕೈಗಾರಿಕಾ ಪ್ರಾಂಗಣ. ಸುಮಾರು 30ಕ್ಕೂ ಅಧಿಕ ಕೈಗಾರಿಕೆಗಳ ಒಳಗೆ ಮಳೆ ನೀರು ಪ್ರವೇಶಿಸಿ ಅಲ್ಲಿನ ಮೋಟಾರ್‌, ಕಚ್ಚಾ ಸಾಮಗ್ರಿ, ಸಿದ್ಧವಾದ ಉತ್ಪನ್ನಗಳು, ಯಂತ್ರೋಪಕರಣಗಳ ಬಿಡಿಭಾಗಗಳು ನೀರಿನಲ್ಲಿ ಕೊಚ್ಚಿ ಹೋಗಿದೆ.

- Advertisement -
spot_img

Latest News

error: Content is protected !!