Saturday, June 13, 2026
Homeಕರಾವಳಿಮಾಲೀಕನ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ ಕಾರ್ಮಿಕ

ಮಾಲೀಕನ ಕೊಠಡಿಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೋಟೆಲ್ ಕಾರ್ಮಿಕ

- Advertisement -
- Advertisement -

ಬಂಟ್ವಾಳ: ಇಲ್ಲಿನ ಬಡ್ಡಕಟ್ಟೆ ಎಂಬಲ್ಲಿ ಹೋಟೆಲ್ ಕಾರ್ಮಿಕನೋರ್ವ ಸಾಲದ ಬಾಧೆಯಿಂದ ಬಳಲುತ್ತಿದ್ದರಿಂದ ಚೀಟಿ ಬರೆದಿಟ್ಟು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಬೆಳ್ತಂಗಡಿ ತಾಲೂಕಿನ ಮರೋಡಿ ಗ್ರಾಮದ ಸೋಮನಾಥ ನಿವಾಸಿ ಶೇಖರ ದೇವಾಡಿಗ.

ಬಂಟ್ವಾಳ ಬಡ್ಡಕಟ್ಟೆ ಯಲ್ಲಿ ಹೋಟೆಲ್ ಒಂದರಲ್ಲಿ ಕಳೆದ ಐದು ತಿಂಗಳಿನಿಂದ ಅಡುಗೆ ಕೆಲಸ ಮಾಡಿಕೊಂಡಿದ್ದ ಈತನು ವಾರಕ್ಕೊಮ್ಮೆ ಊರಿಗೆ ಹೋಗಿ ಬರುತ್ತಿದ್ದ ಎನ್ನಲಾಗಿದೆ.ಶೇಖರ ದೇವಾಡಿಗ ಡಿ.4 ಸೋಮವಾರದಂದು ರಾತ್ರಿ ಕೆಲಸ ಮುಗಿಸಿ, ಬಳಿಕ ಹೋಟೆಲ್ ನ ಮಾಲೀಕರ ವಿಶ್ರಾಂತಿ ಕೊಠಡಿಯಲ್ಲಿ ಮಲಗಿದ್ದರು. ಯಾವಾಗಲೂ ಮುಂಜಾನೆ ಬೇಗ ಎದ್ದು ಹೋಟೆಲ್ ನ ಅಡುಗೆ ಕೆಲಸಕ್ಕೆ ಬರುತ್ತಿದ್ದ ಶೇಖರ ದೇವಾಡಿಗ ಇಂದು ಬೆಳಿಗ್ಗೆ ಕೆಲಸಕ್ಕೆ ಬಾರದ ಹಿನ್ನೆಲೆಯಲ್ಲಿ ಹೋಟೆಲ್ ಮಾಲೀಕ ಕಾರ್ಮಿಕನಿಗೆ ಪೋನ್ ಮಾಡಿದಾಗ ಆತ ರಿಸೀವ್ ಮಾಡಲಿಲ್ಲ. ಸಂಶಯಗೊಂಡ ಹೋಟೆಲ್ ಮಾಲೀಕ ವಿಶ್ರಾಂತಿ ಕೊಠಡಿಗೆ ತೆರಳಿದಾಗ ಮಲಗಿರುವುದು ಕಂಡು ಎಬ್ಬಿಸಿದರು. ಆದರೆ ಆತ ಮಲಗಿರುವ ಪಕ್ಕ ವಿಷದ ಬಾಟಲಿ ಮತ್ತು ಚೀಟಿಯೊಂದಿದ್ದು, ಈತ ವಿಷ ಸೇವಿಸಿರುವ ಬಗ್ಗೆ ಸಂಶಯದಿಂದ ಪೋಲೀಸರಿಗೆ ತಿಳಿಸಿದ್ದಾರೆ.

ಬಂಟ್ವಾಳ ನಗರ ಠಾಣಾ ಎಸ್.ಐ. ರಾಮಕೃಷ್ಣ ಅವರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

- Advertisement -

Latest News

error: Content is protected !!