Sunday, June 28, 2026
Homeಕರಾವಳಿಉಳ್ಳಾಲ: ಹಿಟ್‌ ಅಂಡ್‌ ರನ್‌ ಪ್ರಕರಣ: ಬೈಕ್‌ ಸವಾರ ಚಿಕಿತ್ಸೆ ಫಲಿಸದೇ ಸಾವು

ಉಳ್ಳಾಲ: ಹಿಟ್‌ ಅಂಡ್‌ ರನ್‌ ಪ್ರಕರಣ: ಬೈಕ್‌ ಸವಾರ ಚಿಕಿತ್ಸೆ ಫಲಿಸದೇ ಸಾವು

- Advertisement -
- Advertisement -

ಉಳ್ಳಾಲ: ಜೂ.4ರಂದು ರಾತ್ರಿ ಉಚ್ಚಿಲ, ಸಂಕೋಳಿಗೆ ಎಂಬಲ್ಲಿ ನಡೆದ ಹಿಟ್‌ ಅಂಡ್‌ ರನ್‌ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಬೈಕ್‌ ಸವಾರ ಚಿಕಿತ್ಸೆ ಫಲಿಸದೇ ಇಂದು ಮೃತಪಟ್ಟಿದ್ದಾನೆಂದು ತಿಳಿದುಬಂದಿದೆ.

ಕೋಟೆಕಾರು ಪಟ್ಟಣ ವ್ಯಾಪ್ತಿಯ ಮಾಡೂರು ವೈದ್ಯನಾಥ ದೈವಸ್ಥಾನ ರಸ್ತೆ ನಿವಾಸಿ ತೇಜಸ್ ಕುಲಾಲ್ (28) ಮೃತಪಟ್ಟ ಯುವಕ. ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ತೇಜಸ್‌ಗೆ ಚಿಕಿತ್ಸೆ ನೀಡಲಾಗಿತ್ತೆಂದು ತಿಳಿದುಬಂದಿದೆ.

ಕೇರಳ ನೋಂದಣಿಯ ಕಾರೊಂದು ತೇಜಸ್‌ ಸಂಚರಿಸುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿತ್ತು. ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದ್ದು ಘಟನೆ ನಡೆದ ಮರುದಿನವೇ ಕಾರನ್ನು ಜಪ್ತಿ ಮಾಡಲಾಗಿತ್ತು.

- Advertisement -

Latest News

error: Content is protected !!