ಪುತ್ತೂರು : ಜಿಲ್ಲೆಯಲ್ಲಿ ವೀಕೆಂಡ್ ಕರ್ಫ್ಯೂ ವೇಳೆಯಲ್ಲಿ ಅಂಗಡಿ ತೆರೆಯಲು ಅವಕಾಶ ನೀಡುವಂತೆ ಆಗ್ರಹಿಸಿ ಹೋರಾಟದ ಹಾದಿ ಹಿಡಿದಿದ್ದ ವರ್ತಕರ ಸಂಘ ಇದೀಗ ಅಧಿಕಾರಿಗಳ ಜೊತೆ ಸಭೆಯ ಬಳಿಕ ವೀಕೆಂಡ್ ಕರ್ಫೂ ಉಲ್ಲಂಘನೆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಕೋವಿಡ್ -19ಗೆ ಸಂಬಂಧಿಸಿ ಸೆ.4 ಮತ್ತು 5ರಂದು ನಡೆಯುವ ವೀಕೆಂಡ್ ಕರ್ಪ್ಯೂ ತೆರವು ಮಾಡಬೇಕು ಇಲ್ಲವಾದರೆ ನಾವು ಅಂಗಡಿ ತೆರೆದು ವ್ಯವಹಾರ ನಡೆಸುತ್ತೇವೆ ಎಂದು ವರ್ತಕರ ನಿರ್ಧಾರಕ್ಕೆ ತಹಶೀಲ್ದಾರ್ ರಮೇಶ್ ಬಾಬು ಮತ್ತು ನಗರಸಭೆ ಪೌರಾಯುಕ್ತರು ನಗರಸಭೆ ಸಭಾಂಗಣದಲ್ಲಿ ಸೆ.3 ರಂದು ಸಂಜೆ ಕರೆದ ತುರ್ತು ಸಭೆಯಲ್ಲಿ ತಹಶೀಲ್ದಾರ್ ಮನವಿಯಂತೆ ವರ್ತಕರು ತಮ್ಮ ಅಂಗಡಿ ತೆರವು ನಿರ್ಧಾರವನ್ನು ಬದಲಿಸಿ ವೀಕೆಂಡ್ ಕರ್ಪ್ಯೂಗೆ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ವಿಕೇಂಡ್ ಕರ್ಪ್ಯೂ ನಿಂದಾಗಿ ವ್ಯಾಪಾರದಲ್ಲಿ ನಷ್ಟವುಂಟಾಗುತ್ತಿದೆ ಎಂದು ಆರೋಪಿಸಿ ಪುತ್ತೂರು ವರ್ತಕರ ಸಂಘ ಕರ್ಫೂ ಉಲ್ಲಂಘಿಸಿ ವ್ಯವಹಾರ ನಡೆಸಲು ನಿರ್ಧರಿಸಿತ್ತು. ಈ ಹಿನ್ನಲೆಯಲ್ಲಿ ಇಂದು ವರ್ತಕರ ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಪುತ್ತೂರು ತಹಶೀಲ್ದಾರ್ ಜಿಲ್ಲೆಯ ಕೊರೊನಾ ಸ್ಥಿತಿಗತಿಯನ್ನು ತಿಳಿಸಿದ್ದು, ಈಗಾಗಲೇ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ 2.8 ಇದೆ, 2 ಪರ್ಸೆಂಟ್ ಕ್ಕಿಂತ ಕಡಿಮೆಯಾಗದೆ ಕೊರೊನಾ ಮಾರ್ಗಸೂಚಿಯಲ್ಲಿ ಬದಲಾವಣೆ ಕಷ್ಟ ಎಂದು ವರ್ತಕರಿಗೆ ಮನವರಿಕೆ ಮಾಡಿದ್ದು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗೆ ಸಂಬಂಧಿಸಿ ವೀಕೆಂಡ್ ಕರ್ಪ್ಯೂ ತೆರವು ಮಾಡಲು ಸೋಮವಾರ ದಿನ ಮುಖ್ಯಮಂತ್ರಿಗಳ ಜೊತೆ ಶಾಸಕರು ಸಚಿವರು ಮಾತುಕತೆ ನಡೆಸಲಿದ್ದಾರೆ. ಮುಂದಿನ ವಾರ ವೀಕೆಂಡ್ ಖಂಡಿತವಾಗಿಯೂ ತೆರವಾಗಲಿದೆ ಎಂಬ ಭರವಸೆ ಕೊಟ್ಟಿದ್ದಾರೆ.
ಪುತ್ತೂರು ನಗರಸಭಾ ಆಯುಕ್ತರು ಮತ್ತು ಪುತ್ತೂರು ತಹಶೀಲ್ದಾರ್ ಹಾಗೂ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ವರ್ತಕರು ತಮ್ಮ ನಿರ್ಧಾರದಿಂದ ಹಿಂದೆ ಸರಿದು ಶನಿವಾರ ಮತ್ತು ಭಾನುವಾರ ಅಂಗಡಿ ಬಂದ್ ಮಾಡಲು ಒಪ್ಪಿಗೆ ಸೂಚಿಸಿದ್ದಾರೆ.