Sunday, June 7, 2026
Homeಅಪರಾಧಕಾಸರಗೋಡು: ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ವಂಚನೆ; ಓರ್ವ ಆರೋಪಿ ಬಂಧನ!

ಕಾಸರಗೋಡು: ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ವಂಚನೆ; ಓರ್ವ ಆರೋಪಿ ಬಂಧನ!

- Advertisement -
- Advertisement -

ಕಾಸರಗೋಡು: ಭಾರತದ ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ನಂಬಿಸಿ ಐದು ಲಕ್ಷ ರೂಪಾಯಿ ಪಡೆದು ವಂಚಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೊಬ್ಬನನ್ನು ಚಂದೇರ ಪೊಲೀಸರು ಬಂಧಿಸಿದ್ದಾರೆ.

ಜಾರ್ಖಂಡ್ ಮೂಲದ ಫಾರೂಕ್ ಶೇಕ್ (38) ಬಂಧಿತ ಆರೋಪಿ. ನೀಲೇಶ್ವರ ಮಡಕ್ಕರ ಎಂಬಲ್ಲಿ ಹನೀಫ್ ಮತ್ತು ಸೌದಾ ದಂಪತಿಯಿಂದ ವಾರದ ಹಿಂದೆ ರೂಪಾಯಿಗೆ ಬದಲಾಗಿ ದಿರ್ಹಾಂ ನೀಡುವುದಾಗಿ ನಂಬಿಸಿ 5 ಲಕ್ಷ ಪಡೆದು ಅದಕ್ಕೆ ಬದಲಾಗಿ ದಿರ್ಹಾಂ ಎಂದು ನಂಬಿಸಿ ಕಾಗದದ ತುಂಡುಗಳನ್ನು ಚೀಲದಲ್ಲಿ ತುಂಬಿಸಿ ದಂಪತಿಗೆ ನೀಡಿ ತಂಡ ಪರಾರಿಯಾಗಿತ್ತು. ಈ ಬಗ್ಗೆ ದಂಪತಿ ಚಂದೇರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಪೊಲೀಸರು ಪರಿಸರದ ಸಿಸಿ ಟಿವಿ ಕ್ಯಾಮರಾ ದೃಶ್ಯವನ್ನು ಕಲೆ ಹಾಕಿ ತನಿಖೆ ನಡೆಸಿದ್ದು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!