Monday, June 8, 2026
Homeಇತರಕಡಬ: ದಿನಸಿ ವಿಷಯವಾಗಿ ಗಂಡ ಹೆಂಡತಿ ನಡುವೆ ಗಲಾಟೆ...! ದಾರಿ ಮಧ್ಯದಲ್ಲೇ ಪತ್ನಿ ಹಾಗು...

ಕಡಬ: ದಿನಸಿ ವಿಷಯವಾಗಿ ಗಂಡ ಹೆಂಡತಿ ನಡುವೆ ಗಲಾಟೆ…! ದಾರಿ ಮಧ್ಯದಲ್ಲೇ ಪತ್ನಿ ಹಾಗು ಮಗಳನ್ನು ಬಿಟ್ಟು ಹೋದ ಪತಿ…!

- Advertisement -
- Advertisement -

ಕಡಬ: ಕೌಟುಂಬದಲ್ಲಿ ಕಲಹ ಉಂಟಾದ ಕಾರಣ ವ್ಯಕ್ತಿಯೋರ್ವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ತನ್ನ ಹೆಂಡತಿ ಹಾಗೂ ಮಗಳನ್ನು ದಾರಿ ಮಧ್ಯೆಯೇ ಬಿಟ್ಟು ಹೋದ ಘಟನೆ ನಡೆದಿದೆ.

ಸಿರಿಬಾಗಿಲು ನಿವಾಸಿ 9 ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಇದರ ಪೈಕಿ ಓರ್ವ ಮಗ ಬುದ್ಧಿ ಮಾಂದ್ಯನಾಗಿದ್ದು, ಮದುವೆಯಾದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡುತ್ತಿದ್ದು, ಇದರ ಕುರಿತು ಈ ಮೊದಲು ಪತ್ನಿ ಪುತ್ತೂರು ಮಹಿಳಾ ಠಾಣೆ ಮತ್ತು ಮಹಿಳಾ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದರು.

ಅ. 27 ರಂದು ಪತಿ-ಪತ್ನಿ ಮತ್ತು ಮಕ್ಕಳಿಬ್ಬರು ಕಾರಿನಲ್ಲಿ ಹೋಗುತ್ತಿದ್ದ ವೇಳೆ ಪತಿಯು, ಪತ್ನಿಯೊಂದಿಗೆ ದಿನಸಿ ವಿಷಯವಾಗಿ ಜಗಳ ತೆಗೆದು ಅವಾಚ್ಯವಾಗಿ ಬೈದು ಮಗಳನ್ನು ಮತ್ತು ಹೆಂಡತಿಯನ್ನು ದಾರಿ ಮಧ್ಯೆಯೇ ಬಿಟ್ಟು, ಮಗನನ್ನು ಜೊತೆ ಕರೆದುಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!