Thursday, June 4, 2026
Homeಕರಾವಳಿಮಂಗಳೂರುಉಪ್ಪಿನಂಗಡಿ; ಯುವತಿ ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡಲು ಹೋಗಿ ಸಿಕ್ಕಿ ಬಿದ್ದ ಇಬ್ಬರು ಮಕ್ಕಳ ತಂದೆ

ಉಪ್ಪಿನಂಗಡಿ; ಯುವತಿ ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡಲು ಹೋಗಿ ಸಿಕ್ಕಿ ಬಿದ್ದ ಇಬ್ಬರು ಮಕ್ಕಳ ತಂದೆ

- Advertisement -
- Advertisement -

ಉಪ್ಪಿನಂಗಡಿ; ಯುವತಿ ಸ್ನಾನ ಮಾಡುತ್ತಿದ್ದನ್ನು ಕದ್ದು ನೋಡಲು ಹೋಗಿ ಇಬ್ಬರು ಮಕ್ಕಳ ತಂದೆಯೊಬ್ಬ ಸಿಕ್ಕಿ ಬಿದ್ದ ಘಟನೆ ಉಪ್ಪಿನಂಗಡಿಯ ಪೆರಿಯಡ್ಕ‌ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ. ರಹಿಮಾನ್ ಬಂಧಿತ ಆರೋಪಿ

ಆರೋಪಿ ಯುವತಿ ಬಚ್ಚಲು ಮನೆಯಲ್ಲಿ ಸ್ನಾನ ಮಾಡುತ್ತಿದ್ದಾಗ ಮೆಲ್ಲ ಕಿಟಕಿಯ ಬಾಗಿಲನ್ನು ಸರಿಸಿ ನೋಡಲು ಯತ್ನಿಸಿದ್ದಾನೆ.  ವೇಳೆ  ಯಾರೋ ಇರುವಂತೆ ಯುವತಿಗೆ ಸಂದೇಹ ಮೂಡಿದೆ. ಕೂಡಲೇ ಆಕೆಯನ್ನು ತಾಯಿಯನ್ನು ಕರೆದಿದ್ದಾಳೆ.ಈ ವೇಳೆ ತಾಯಿ ಬಂದು ನೋಡಿದಾಗ ಆರೋಪಿ ಓಡುತ್ತಿರೋದು ಗೊತ್ತಾಗಿದೆ. ಅಲ್ಲದೇ  ಅದು ರಹಿಮಾನ್ ಅನ್ನೋದು ಗೊತ್ತಾಗಿದೆ.

ಈ ವೇಳೆ ಸಹಾಯಕ್ಕಾಗಿ ಬೊಬ್ಬೆ ಹೊಡೆದಾಗ ಸ್ಥಳೀಯರು ಬಂದಿದ್ದಾರೆ. ಅಲ್ಲದೇ ರಹಿಮಾನ್ ಕೂಡ ಏನೂ ನಡೆದಿಲ್ಲ. ನಾನು ಅಂತಾ ಯಾರಿಗೂ ಗೊತ್ತಾಗಿಲ್ಲ ಅಂತಾ ಸಭ್ಯನಂತೆ ಯುವತಿಯ ಮನೆ ಬಳಿ ಬಂದಿದ್ದಾನೆ. ಈ ವೇಳೆ ಸ್ಥಳೀಯರು ಆರೋಪಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಬಳಿಕ ಘಟನಾ ಸ್ಥಳಕ್ಕೆ ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ, ಸ್ಥಳೀಯ ಬಿಜೆಪಿ ಮುಖಂಡರಾದ ಸುರೇಶ್ ಅತ್ರೆಮಜಲು,ಆನಂದ ಕುಂಟಿನಿ, ಸಂತೋಷ್ ಕುಮಾರ್ ಪರಂದಾಜೆ, ಬಜತ್ತೂರು ಗ್ರಾ.ಪಂ.ಅಧ್ಯಕ್ಷ ಗಂಗಾಧರ ಪಿ.ಎನ್.ಸೇರಿದಂತೆ ಹಲವರು ಪೊಲೀಸ್ ಠಾಣೆಗೆ ಭೇಟಿ ನೀಡಿ,ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡು, ಆರೋಪಿ ವಿರುದ್ಧ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

- Advertisement -

Latest News

error: Content is protected !!