Wednesday, June 26, 2024
Homeಅಪರಾಧನಿಷೇದಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ ಪೊಲೀಸ್ ವಶಕ್ಕೆ; 7 ಲಕ್ಷ್ಮ ಮೌಲ್ಯದ...

ನಿಷೇದಿತ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಡ್ರಗ್ ಪೆಡ್ಲರ್ ಪೊಲೀಸ್ ವಶಕ್ಕೆ; 7 ಲಕ್ಷ್ಮ ಮೌಲ್ಯದ ಸೊತ್ತು ವಶ

spot_img
- Advertisement -
- Advertisement -

ಉಳ್ಳಾಲ: ಪೆರ್ಮನ್ನೂರು ಗ್ರಾಮದ ಸಂತೋಷನಗರದಲ್ಲಿ ನಿಷೇದಿತ ಮಾದಕ ವಸ್ತು ಮೆಥಂಫೆಟಮೈನ್ ಮತ್ತು ಎಲ್.ಎಸ್.ಡಿ. ಸ್ಟಾಂಪ್ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿದ್ದ ಡ್ರಗ್ ಪೆಡ್ಲರ್ ಆರೋಪಿಯನ್ನು ಕೋಟೆಕಾರು ಗ್ರಾಮದ ಮಾಡೂರು ಸಾಯಿ ಮಂದಿರದ ಸಮೀಪದ ಗೌಂಡ್ ಬಳಿ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯ ಹೆಸರು ಆಶಿತ್ ಯಾನೆ ಅಶ್ವಿತ್ ಯಾನೆ ಆಶು. ಆತನಿಂದ 6 ಲಕ್ಷ ರೂಪಾಯಿ ಮೌಲ್ಯದ 100 ಗ್ರಾಂ ತೂಕದ ಎಂ.ಡಿ.ಎಂ.ಎ., 30,000 ರೂಪಾಯಿ ಮೌಲ್ಯದ 600 ಗ್ರಾಂ ಗಾಂಜಾ, 1 ಲಕ್ಷ ರೂಪಾಯಿ ಮೌಲ್ಯದ ಕೆಟಿಎಂ ಡ್ಯೂಕ್ ಮೋಟಾರು ಸೈಕಲ್ ಸೇರಿದಂತೆ ಒಟ್ಟು 7,77,೦೦೦ ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಉಳ್ಳಾಲ ಠಾಣೆಯ ಪೊಲೀಸ್ ನಿರೀಕ್ಷಕ ಬಾಲಕೃಷ್ಣ ಎಚ್.ಎನ್, ಪಿ.ಎಸ್.ಐ.ಗಳಾದ ಶೀತಲ್ ಅಲಗೂರ ಮತ್ತು ಸಂತೋಷ ಕುಮಾರ್.ಡಿ. ಹಾಗೂ ಮಂಗಳೂರು ದಕ್ಷಿಣ ಉಪ-ವಿಭಾಗದ ಎ.ಸಿ.ಪಿ. ನೇತೃತ್ವದ ಡ್ರಗ್ಸ್ ನಿಗ್ರಹ ದಳದ ಪಿ.ಎಸ್.ಐ. ಪುನಿತ್ ಗಾಂವರ್ ಮತ್ತು ಸಿಬಂದಿಯು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಉಳಿದ ಆರೋಪಿಗಳಾದ ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್. ಅವರನ್ನು ಡಿ. 4 ರಂದು ಪೊಲೀಸರು ಬಂಧಿಸಿದ್ದು, ಅವರಿಂದ 132 ಗ್ರಾಂ ತೂಕದ ಮೆಥಂಫೆಟಮೈನ್ ಮತ್ತು 250 ಎಲ್.ಎಸ್.ಡಿ. ಸ್ಟಾಂಪ್ ಡ್ರಗ್, ನಗದು 3,70,050 ರೂಪಾಯಿ ಹಾಗೂ ಒಂದು ಸ್ವಿಪ್ಟ್ ಕಾರು ಸೇರಿದಂತೆ ಒಟ್ಟು 14 ಲಕ್ಷದ ಒಂದು ಸಾವಿರದ ಐವತ್ತು ರೂಪಾಯಿ ಮೌಲ್ಯದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಇದೀಗ ಅದರ ಮುಂದುವರಿದ ಭಾಗವಾಗಿ 3ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!