Wednesday, April 16, 2025
Homeಇತರಕಡಬ: ಬೈಕ್ ಗೆ ಅಡ್ಡಬಂದ ನಾಯಿ...! ಸಹ ಸವಾರ ಮೃತ್ಯು...!

ಕಡಬ: ಬೈಕ್ ಗೆ ಅಡ್ಡಬಂದ ನಾಯಿ…! ಸಹ ಸವಾರ ಮೃತ್ಯು…!

spot_img
- Advertisement -
- Advertisement -

ಕಡಬ: ದ್ವಿಚಕ್ರ ವಾಹನಕ್ಕೆ ನಾಯಿಯೊಂದು ಅಡ್ಡ ಬಂದ ಹಿನ್ನೆಲೆ ಸಹ ಸವಾರ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಘಟನೆ ತಾಲೂಕಿನ ಎಡಮಂಗಲ ಎಂಬಲ್ಲಿ ನಡೆದಿದೆ. ಮೃತನನ್ನು ಸುರೇಶ್ ಎಂದು ಗುರುತಿಸಲಾಗಿದೆ.

ನ.15 ರಂದು ಕಡಬ ತಾಲೂಕು ಎಡಮಂಗಲ ಗ್ರಾಮದ ಎಡಮಂಗಲ ಚಾರ್ವಕ ರಸ್ತೆಯಲ್ಲಿ ಎಡಮಂಗಲ ಪೇಟೆಯಿಂದ ಕೊಳಂಬೆ ಎಂಬಲ್ಲಿಗೆ ರಬ್ಬರ್ ಟ್ಯಾಪಿಂಗ್ ಮಾಡುತ್ತಿದ್ದ ಕೇರಳ ಮೂಲದ ಸಂತೋಷ್ ಎಂಬವರು ಅವರ ಅಣ್ಣ ಸುರೇಶ್ ಎಂಬವರನ್ನು ಸಹ ಸವಾರನನ್ನಾಗಿ ಕುಳ್ಳಿರಿಸಿಕೊಂಡು ಹೋಗುತ್ತಿದ್ದ ವೇಳೆ ಘಟನೆ ನಡೆದಿದೆ. ನಾಯಿಯೊಂದು ಅಡ್ಡ ಬಂದ ಪರಿಣಾಮ ಸವಾರ ಸಂತೋಷನ ಹತೋಟಿ ತಪ್ಪಿ ಮಗುಚಿ ಬಿದ್ದಿದ. ಅಪಘಾತದ ರಭಸಕ್ಕೆ ಸಹ ಸವಾರನಾಗಿದ್ದ ಸುರೇಶ ತಲೆಗೆ ಗಂಭೀರ ಗಾಯಗೊಂಡಿದ್ದನು.

ಗಾಯಾಳುವನ್ನು ಕಡಬ ಸರಕಾರಿ ಅಸ್ಪತ್ರೆಗೆ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ, ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!