Sunday, June 16, 2024
HomeUncategorizedಅಂಗಡಿಯಲ್ಲಿದ್ದ ಬೆಕ್ಕನ್ನು ಎಗರಿಸಿದ ಗ್ರಾಹಕ: ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ!!

ಅಂಗಡಿಯಲ್ಲಿದ್ದ ಬೆಕ್ಕನ್ನು ಎಗರಿಸಿದ ಗ್ರಾಹಕ: ಕಳ್ಳನ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ!!

spot_img
- Advertisement -
- Advertisement -

ಚಿಕ್ಕಮಗಳೂರು : ಅಂಗಡಿಯಲ್ಲಿ ಆಟವಾಡಿಕೊಂಡಿದ್ದ ಬೆಕ್ಕಿನ ಮರಿಯೊಂದನ್ನು ಗ್ರಾಹಕರೊಬ್ಬರು ಬ್ಯಾಗ್ ನಲ್ಲಿ ಹಾಕಿಕೊಂಡು ಎಸ್ಕೇಪ್ ಆದ ಘಟನೆ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬಣಕಲ್ ನ ದಿನಸಿ ಅಂಗಡಿಯ ಮಾಲೀಕರೊಬ್ಬರು ತಮ್ಮ ಮನೆಯಲ್ಲಿ ಎರಡು ಬೆಕ್ಕಿನ ಮರಿಗಳನ್ನು ಸಾಕಿದ್ದು, ಅವುಗಳು ತಮ್ಮ ಅಂಗಡಿಯಲ್ಲೇ ಆಟವಾಡಿಕೊಂಡು ಇರುತ್ತಿದ್ದವು. ಆದರೆ ಇಂದು ಅಂಗಡಿಗೆ ಬಂದ ಗ್ರಾಹಕರೊಬ್ಬರು ಮುದ್ದಾದ ಬೆಕ್ಕಿನ ಮರಿಯನ್ನು ನೋಡಿ ತಮ್ಮ ಚೀಲದಲ್ಲಿ ಹಾಕಿ ಎಗರಿಸಿದ್ದಾರೆ. ಇದರಿಂದ ಇನ್ನೊಂದು ಬೆಕ್ಕಿನ ಮರಿ ಏನನ್ನೂ ತಿನ್ನದೆ ಇನ್ನೊಂದು ಬೆಕ್ಕಿಗಾಗಿ ಕಾಯುತ್ತಿದೆ. ಇನ್ನೊಂದೆಡೆ ಸಾಕಿದ ಮಾಲೀಕ ಕೂಡ ಈ ಕುರಿತು ಬೇಸರ ವ್ಯಕ್ತಪಡಿಸಿದ್ದಾರೆ.

- Advertisement -
spot_img

Latest News

error: Content is protected !!