Thursday, June 25, 2026
Homeತಾಜಾ ಸುದ್ದಿಕನ್ನಡದ ರಿಯಾಲಿಟಿ ಶೋವೊಂದರ ಸ್ಪರ್ಧಿಯ ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ;...

ಕನ್ನಡದ ರಿಯಾಲಿಟಿ ಶೋವೊಂದರ ಸ್ಪರ್ಧಿಯ ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ; ದೂರು ದಾಖಲು

- Advertisement -
- Advertisement -

ಬೆಂಗಳೂರು: ಕನ್ನಡದ ರಿಯಾಲಿಟಿ ಶೋವೊಂದರ ಸ್ಪರ್ಧಿಯ ಖಾಸಗಿ ವೀಡಿಯೋ ರೆಕಾರ್ಡ್ ಮಾಡಿ ಹಣಕ್ಕಾಗಿ ಬ್ಲ್ಯಾಕ್ ಮೇಲ್ ಮಾಡಿದ ಬಗ್ಗೆ ದೂರು ದಾಖಲಾಗಿದೆ.

ಕೋರಮಂಗಲ ಇಂಡೋರ್ ಸ್ಟೇಡಿಯಂನಲ್ಲಿ ಇತ್ತೀಚೆಗೆ ನಡೆದ ಮಹಿಳಾ ಸೆಲೆಬ್ರೆಟಿ ಕ್ರಿಕೆಟ್ ಟೂರ್ನಿಯಲ್ಲಿ ಈ ವಿಡಿಯೋ ರೆಕಾರ್ಡ್‌ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ನಟಿ ಬಾತ್‌ರೂಮ್‌ನಲ್ಲಿದ್ದಾಗ ಅಪರಿಚಿತ ಈ ವಿಡಿಯೋ ಮಾಡಿದ್ದಾನೆ. ಬಳಿಕ Swan.3704722 ಇನ್ಸ್ಟಾ ಅಕೌಂಟ್‌ನಿಂದ ಆಕೆಯ ಸ್ನೇಹಿತೆಯ ಅಕೌಂಟ್‌ಗೆ ನಾಲ್ಕಾರು ವೀಡಿಯೋಗಳನ್ನು ಕಳಿಸಿದ್ದ. ವಿಡೀಯೋ ಪಬ್ಲಿಕ್ ಮಾಡಬಾರದೆಂದರೆ ಇಂತಿಷ್ಟು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟಿದ್ದಾನೆ ಎಂದು ಆರೋಪಿಸಲಾಗಿದೆ. 

 ವಿಡಿಯೋ ಕಾಲ್ ಮಾಡುವ ಮೂಲಕ ಮೂರ್ನಾಲ್ಕು ಬಾರಿ ಬ್ಲಾಕ್‌ಮೇಲ್‌ ಮಾಡಿದ್ದಾನೆ. ಹಣ ನೀಡದೇ ಹೋದ್ರೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಮಾಡೋದಾಗಿ ಬೆದರಿಕೆ ಹಾಕಿದ್ದಾನೆ. ಈ ಸಂಬಂಧ ಸಿಟಿ ಸೆನ್ ಪೊಲೀಸ್‌ ಠಾಣೆಯಲ್ಲಿ ಯುವತಿ ದೂರು ನೀಡಿದ್ದಾಳೆ.

ದೂರಿನ ಅನ್ವಯ ಆರೋಪಿ ವಿರುದ್ಧ ಐಟಿ ಆಕ್ಟ್ ಮತ್ತು ಬಿಎನ್‌ಎಸ್ 77, 351 ಮತ್ತು 308 ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ. 

- Advertisement -

Latest News

error: Content is protected !!