Monday, August 31, 2026
Homeಆರಾಧನಾಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಬಂದಿದ್ದ ₹4 ಕೋಟಿಯ ಚೆಕ್ ಬೌನ್ಸ್: ಖಾತೆಯಲ್ಲಿದ್ದುದು ಕೇವಲ 3 ರೂಪಾಯಿ!

ಅಯೋಧ್ಯೆ ಶ್ರೀರಾಮ ಮಂದಿರಕ್ಕೆ ಬಂದಿದ್ದ ₹4 ಕೋಟಿಯ ಚೆಕ್ ಬೌನ್ಸ್: ಖಾತೆಯಲ್ಲಿದ್ದುದು ಕೇವಲ 3 ರೂಪಾಯಿ!

- Advertisement -
- Advertisement -

ಅಯೋಧ್ಯೆಯ ಶ್ರೀರಾಮ ಮಂದಿರದ ಸಿಬ್ಬಂದಿಗೆ ಮೂಲಸೌಕರ್ಯಗಳನ್ನು ಕಲ್ಪಿಸುವ ಉದ್ದೇಶದಿಂದ ನೀಡಲಾಗಿದ್ದ 4 ಕೋಟಿ ರೂಪಾಯಿ ಮೌಲ್ಯದ ಚೆಕ್ ಬೌನ್ಸ್ ಆದ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ.

ಚೆನ್ನೈ ಮೂಲದ ಮಹಿಳಾ ಭಕ್ತಿಯೊಬ್ಬರು ನೀಡಿದ್ದ ಈ ಚೆಕ್ ಅನ್ನು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಬ್ಯಾಂಕ್‌ಗೆ ಸಲ್ಲಿಸಿದಾಗ, ಆ ಖಾತೆಯಲ್ಲಿ ಕೇವಲ 3 ರೂಪಾಯಿ ಇರುವುದು ಕಂಡುಬಂದಿದೆ. ಖಾತೆಯಲ್ಲಿ ಅಗತ್ಯ ಮೊತ್ತವಿಲ್ಲದೆ ಇಷ್ಟೊಂದು ದೊಡ್ಡ ಮೌಲ್ಯದ ಚೆಕ್ ನೀಡಿದ್ದಕ್ಕೆ ವಿವರಣೆ ಕೋರಿ ಬ್ಯಾಂಕ್ ಮಹಿಳೆಗೆ ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದೆ. ಈ ಮಹಿಳೆ ದೇವಾಲಯಕ್ಕೆ ಪ್ರತ್ಯೇಕವಾಗಿ ₹10,000 ನಗದು ದೇಣಿಗೆಯನ್ನೂ ನೀಡಿದ್ದರು.

ಆದರೆ, ತಮ್ಮ ₹4 ಕೋಟಿಯ ಚೆಕ್ ಮೊತ್ತವನ್ನು ಕೇವಲ ದೇವಾಲಯದ ಸಿಬ್ಬಂದಿಯ ಸೌಲಭ್ಯಗಳಿಗೆ ಮಾತ್ರ ಬಳಸಬೇಕು ಎಂದು ಅವರು ಟ್ರಸ್ಟ್‌ನಿಂದ ಲಿಖಿತ ಭರವಸೆ ಕೋರಿದ್ದರು. ಆದರೆ ಟ್ರಸ್ಟ್ ಅಂತಹ ಯಾವುದೇ ಲಿಖಿತ ಭರವಸೆ ನೀಡಲು ನಿರಾಕರಿಸಿದ್ದು, ಪ್ರಸ್ತುತ ಮಹಿಳೆಯೊಂದಿಗೆ ಮಾತುಕತೆ ನಡೆಸಿ ಈ ಸಮಸ್ಯೆಯನ್ನು ಬಗೆಹರಿಸಲು ಯತ್ನಿಸುತ್ತಿದೆ. ದೇವಾಲಯಕ್ಕೆ ಪ್ರತಿ ತಿಂಗಳು ನಗದು, ಆನ್‌ಲೈನ್ ಮತ್ತು ಚೆಕ್‌ಗಳ ಮೂಲಕ ಸುಮಾರು ₹3 ರಿಂದ ₹4 ಕೋಟಿ ದೇಣಿಗೆ ಹರಿದುಬರುತ್ತಿದ್ದು, ಅದರಲ್ಲಿ ಚೆಕ್‌ಗಳ ಮೂಲಕವೇ ಅಂದಾಜು ₹1 ರಿಂದ ₹1.5 ಕೋಟಿ ಸಂಗ್ರಹವಾಗುತ್ತದೆ. ಇದರ ನಡುವೆಯೇ ಈ ಘಟನೆ ಸಂಭವಿಸಿದೆ.

ಹಿಂದೆ 2020 ರಲ್ಲಿ ನಡೆದ ‘ನಿಧಿ ಸಮರ್ಪಣ ಅಭಿಯಾನ’ದ 45 ದಿನಗಳಲ್ಲಿ ಸುಮಾರು ₹3,500 ಕೋಟಿ ಸಂಗ್ರಹವಾದಾಗಲೂ ತಾಂತ್ರಿಕ ಕಾರಣಗಳಿಂದ ಸುಮಾರು ₹100 ಕೋಟಿ ಮೌಲ್ಯದ ಚೆಕ್‌ಗಳು ಬೌನ್ಸ್ ಆಗಿದ್ದವು. ಆ ಪೈಕಿ ಹೆಚ್ಚಿನ ಮೊತ್ತವನ್ನು ನಂತರ ಮರುಪಾವತಿಸಿಕೊಳ್ಳಲಾಯಿತಾದರೂ, ಸುಮಾರು ₹22 ಕೋಟಿ ಹಣ ಇಂದಿಗೂ ವಸೂಲಿಯಾಗಬೇಕಿದೆ.

- Advertisement -

Latest News

error: Content is protected !!