ಪುತ್ತೂರು: ಇಲ್ಲಿನ ದಲಿತ ಕೂಲಿ ಕಾರ್ಮಿಕನೋರ್ವನ ಮೃತದೇಹವನ್ನು ಸಂಸ್ಥೆಯೊಂದರೆ ಮಾಲಕ ಹಾಗೂ ಇತರ ಕಾರ್ಮಿಕರು ಸೇರಿ ರಸ್ತೆ ಬದಿಯಲ್ಲಿ ಇರಿಸಿ ಹೋಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ಪ್ರಮುಖ ಆರೋಪಿ ಹೆನ್ರಿ ತಾವೋ ಸಹಿತ ಮೂವರನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಕಾರ್ಮಿಕ ಶಿವಪ್ಪ ಸಾಲ್ಮರ ಕೆರೆಮೂಲೆಯವರಾಗಿದ್ದು, ಅವರ ಮನೆಯ ಎದುರಿಗಿನ ರಸ್ತೆ ಬದಿಯಲ್ಲಿಯೇ ಮೃತದೇಹವನ್ನು ಇರಿಸಿ ಹೋಗಿದ್ದರು. ಇದೀಗ ಆರೋಪಿಗಳ ವಿರುದ್ಧ ದಲಿತ ದೌರ್ಜನ್ಯ ಪ್ರಕರಣ ದಾಖಲಾಗಿತ್ತು. ಪ್ರಕರಣದ ಓರ್ವ ಆರೋಪಿಯಾದ ಸ್ಪ್ಯಾನಿ ಮೇಸ್ತ್ರಿ ಎಂಬವರನ್ನು ಪೊಲೀಸರು ಆರಂಭದಲ್ಲಿಯೇ ಬಂಧಿಸಿದ್ದರು. ಇನ್ನು ಶಿವಪ್ಪ ಅವರು ಕೆಲಸ ಮಾಡುತ್ತಿದ್ದ ಸಂಸ್ಥೆಯ ಮಾಲಕ ಹೆನ್ರಿ ತಾವೋ ಅವರ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿತ್ತು. ಇದೀಗ ತನಿಖೆ ನಡೆಸಿದ ಪೊಲೀಸರು ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿ ಹೆನ್ರಿ ತಾವೋ ಅವರ ಪುತ್ರನ ವಿರುದ್ಧವೂ ಆದಿ ದ್ರಾವಿಡ ಸಂಘಟನೆ ಪೊಲೀಸರಿಗೆ ದೂರು ನೀಡಿತ್ತು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಹೆನ್ರಿ ತಾವೋ, ಅವರ ಪುತ್ರ ಕಿರಣ್ ಮತ್ತು ಸಹಾಯಕ ಪ್ರಕಾಶ್ ಎಂಬವರನ್ನು ಬಂಧಿಸಿದ್ದಾರೆ. ಇನ್ನು ಆದಿ ದ್ರಾವಿಡ ಸಮಾಜ ಸೇವಾ ಸಂಘದ ಆಶ್ರಯದಲ್ಲಿ ಪ್ರಕರಣದ ಪ್ರಮುಖ ಆರೋಪಿ ಹೆನ್ರಿ ತಾವೋ ಅವರ ಬಂಧನಕ್ಕೆ ಆಗ್ರಹಿಸಿನ.22ರಂದು ಪ್ರತಿಭಟನೆ ನಡೆದಿತ್ತು.