Sunday, June 7, 2026
Homeಇತರಚಿಕ್ಕಮಗಳೂರು: 13 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು;ಮಕ್ಕಳು ಸೇರಿ ಹತ್ತು ಜನ ಪಾರು

ಚಿಕ್ಕಮಗಳೂರು: 13 ಅಡಿ ಆಳದ ಕಂದಕಕ್ಕೆ ಬಿದ್ದ ಕಾರು;ಮಕ್ಕಳು ಸೇರಿ ಹತ್ತು ಜನ ಪಾರು

- Advertisement -
- Advertisement -

ಚಿಕ್ಕಮಗಳೂರು : ಐವರು ಮಕ್ಕಳು ಸೇರಿದಂತೆ ಹತ್ತು ಜನ ಪ್ರಯಾಣಿಸುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ 13 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಜಿಲ್ಲೆಯ ಬಾಳೆಹೊನ್ನೂರು ಸಮೀಪ ನಡೆದಿದೆ.

ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲವಾದರೂ ಮಹಿಳೆಗೆ ಪೆಟ್ಟಾಗಿದೆ.ಆನೇಕಲ್ ನಿಂದ ಹೊರನಾಡಿಗೆ ತೆರಳುತ್ತಿದ್ದ ವೇಳೆಯಲ್ಲಿ ಬಾಳೆಹೊನ್ನೂರು ಸಮೀಪದ ವಾಟುಕುಡಿಗೆ ಸೇತುವೆ ಕಾರು ಡಿಕ್ಕಿ ಹೊಡೆದು 13 ಅಡಿ ಆಳದ ಕಂದಕಕ್ಕೆ ಬಿದ್ದಿದೆ.

ಇನ್ನು ಕಾರಿನಲ್ಲಿ ಕಾರಿನಲ್ಲಿ ಐವರು ಮಕ್ಕಳು, ಮೂವರು ಮಹಿಳೆಯರು ಹಾಗೂ ಇಬ್ಬರು ಪುರುಷರಿದ್ದರು ಎಂದು ತಿಳಿದುಬಂದಿದೆ.ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ.

ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

- Advertisement -

Latest News

error: Content is protected !!