Wednesday, June 3, 2026
Homeಕರಾವಳಿರಾಜ್ಯದಲ್ಲಿಂದು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಆರಂಭ : ಯಾತ್ರೆಯಲ್ಲಿ ಇಂದು ಪುತ್ತೂರು, ಸುಳ್ಯದ ಕಾಂಗ್ರೆಸ್...

ರಾಜ್ಯದಲ್ಲಿಂದು ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಆರಂಭ : ಯಾತ್ರೆಯಲ್ಲಿ ಇಂದು ಪುತ್ತೂರು, ಸುಳ್ಯದ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಭಾಗಿ

- Advertisement -
- Advertisement -

ಗುಂಡ್ಲುಪೇಟೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಮ್ಮಿಕೊಂಡಿರುವ ಭಾರತ್ ಜೋಡೋ ಪಾದಯಾತ್ರೆ ಇಂದು ಕರ್ನಾಟಕ ಪ್ರವೇಶಿಸಲಿದೆ.‌

ಕನ್ಯಾಕುಮಾರಿಯಿಂದ ಆರಂಭ ಆಗಿರುವ ಭಾರತ್ ಜೋಡೋ ಯಾತ್ರೆ‌ಗೆ ಇಂದು ಗುಂಡ್ಲುಪೇಟೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌‌. ಶಿವಕುಮಾರ್ ಮತ್ತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ವಾಗತ ಕೋರಲಿದ್ದಾರೆ.

ಇಂದು ಸುಮಾರು 20 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದ್ದು, ಮೊದಲನೇ ದಿನ ಪುತ್ತೂರು ಮತ್ತು ಸುಳ್ಯ ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು, ಭಾಗಿಯಾಗಲಿದ್ದಾರೆ.

ಒಟ್ಟು 7 ವಿಧಾನಸಭಾ ಕ್ಷೇತ್ರಗಳ ಕಾಂಗ್ರೆಸ್ ನಾಯಕರು, ಕಾರ್ಯಕರ್ತರು ಭಾಗಿಯಾಗಲಿದ್ದಾರೆ.

ಇಂದು ತಮಿಳುನಾಡಿನ‌ ಗೂಡಲೂರಿನಿಂದ ಗುಂಡ್ಲುಪೇಟೆ ಪ್ರವೇಶಿಸಲಿರುವ ಯಾತ್ರೆ ರಾಜ್ಯದಲ್ಲಿ ಒಟ್ಟು 22 ದಿನಗಳ 511 ಕಿಲೋ ಮೀಟರ್ ದೂರ ನಡೆಯಲಿದೆ.

- Advertisement -

Latest News

error: Content is protected !!