Thursday, June 25, 2026
Homeತಾಜಾ ಸುದ್ದಿಗಂಡನಿಗೆ ಕೈಕೊಟ್ಟು ಇನ್ಸ್ಟಾಗ್ರಾಂ ಗೆಳತಿಯೊಂದಿಗೆ ಓಡಿ ಹೋದ ವಿವಾಹಿತೆ

ಗಂಡನಿಗೆ ಕೈಕೊಟ್ಟು ಇನ್ಸ್ಟಾಗ್ರಾಂ ಗೆಳತಿಯೊಂದಿಗೆ ಓಡಿ ಹೋದ ವಿವಾಹಿತೆ

- Advertisement -
- Advertisement -

ಉತ್ತರಪ್ರದೇಶ; ಗಂಡನಿಗೆ ಕೈಕೊಟ್ಟು ವಿವಾಹಿತೆ  ಇನ್ಸ್ಟಾಗ್ರಾಂ  ಗೆಳತಿಯೊಂದಿಗೆ ಓಡಿ ಹೋದ ಘಟನೆ ಮಥುರಾದಲ್ಲಿ ನಡೆದಿದೆ.

ಕೋಸಿಕಲಾದ ವಿವಾಹಿತ ಯುವತಿಗೆ ಇನ್‌ಸ್ಟಾಗ್ರಾಮ್ ಮೂಲಕ ಗೋರಖ್‌ಪುರದ ಹುಡುಗಿಯೊಂದಿಗೆ ಸ್ನೇಹ ಆಗಿದೆ. ಇದಾದ ಬಳಿಕ ಮೂರು ತಿಂಗಳ ಹಿಂದೆ ಮಥುರಾದ ಯುವತಿ ಗೋರಖ್‌ಪುರಕ್ಕೆ ಓಡಿ ಹೋಗಿದ್ದಳು. ಓಡಿ ಹೋದವಳು ನಾಲ್ಕು ದಿನಗಳ ಹಿಂದೆ ಮರಳಿ ವಕೀಲರೊಂದಿಗೆ ಮಥುರಾಕ್ಕೆ ಬಂದು ವಕೀಲರ ಮೂಲಕ ಕುಟುಂಬದಿಂದ ಬಿಡುಗಡೆ ಕೊಡುವಂತೆ ಕೇಳಿಕೊಂಡಿದ್ದಾಳೆ.  ಗೋರಖ್‌ಪುರದ ಹುಡುಗಿಯನ್ನು ಮದುವೆಯಾಗುವುದಾಗಿ ಕುಟುಂಬದ ಸದಸ್ಯರಿಗೆ ತಿಳಿಸಿದ್ದಾಳೆ.

ಇದಕ್ಕೆ ಮನೆಯವರು ವಿರೋಧಿಸಿದ್ದರು.ಆದರೂ ಪಟ್ಟು ಬಿಡದೇ ವಿವಾಹಿತೆ ಲಾಯರ್​ ಮೂಲಕ ಪೊಲೀಸರ ಬಳಿಗೆ ಕುಟುಂಬಸ್ಥರನ್ನು ಕರೆದುಕೊಂಡು ಹೋಗಿದ್ದಾಳೆ. ಕುಟುಂಬಸ್ಥರನ್ನು ಸಲಿಂಗ ಮದುವೆಗೆ ಒತ್ತಾಯಿಸಿದ್ದಾಳೆ.

ಇದರಿಂದ ನೊಂದ ಯುವತಿಯ ತಾಯಿ ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಈ ವೇಳೆ ಪೊಲೀಸರು ಮಧ್ಯಪ್ರವೇಶಿಸಿ ರಕ್ಷಣೆ ಮಾಡಿದ್ದಾರೆ. ಬಳಿಕ ‌ಲೆಸ್ಬಿಯನ್ ಜೋಡಿ ವಿವಾಹವಾಗಿದೆ.

- Advertisement -

Latest News

error: Content is protected !!