Wednesday, June 3, 2026
Homeಕರಾವಳಿಉಡುಪಿಬೈಂದೂರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಓರ್ವ ಸವಾರ ಮೃತ್ಯು

ಬೈಂದೂರು: ದ್ವಿಚಕ್ರ ವಾಹನಗಳ ನಡುವೆ ಅಪಘಾತ: ಓರ್ವ ಸವಾರ ಮೃತ್ಯು

- Advertisement -
- Advertisement -

ಬೈಂದೂರು: ದ್ವಿಚಕ್ರ ವಾಹನಗಳ ನಡುವೆ ರಸ್ತೆ ಅಪಘಾತ ಸಂಭವಿಸಿ, ಓರ್ವ ಸವಾರ ಸಾವನ್ನಪ್ಪಿರುವ ಘಟನೆ ತಾಲೂಕಿನ ಯಡ್ತರೆಯಲ್ಲಿ ನಡೆದಿದೆ.

ಜಗದೀಶ್ ಪಟ್ಬಾಲ್ ಮೃತಪಟ್ಟವರು. ನಿನ್ನೆ ಯಡ್ತರೆ ಜಂಕ್ಷನ್ ನಲ್ಲಿ ಜಗದೀಶ್ ಪಟ್ಬಾಲ್ ರವರು ಪತ್ನಿಯೊಂದಿಗೆ ಬಿಜೂರು ಕಡೆಯಿಂದ ಬಂದು ಕೊಲ್ಲೂರಿಗೆ ಹೋಗುವಾಗ ಕುಂದಾಪುರ ಕಡೆಯಿಂದ ಬೈಂದೂರು ಕಡೆಗೆ ಅತೀವೇಗದಿಂದ ಬಂದ ಮತ್ತೊಂದು ದ್ವಿಚಕ್ರ ವಾಹನ ಸವಾರ ಮಹಮ್ಮದ್ ಇಬ್ರಾಹಿಂ ಎಂಬಾತ ಜಗದೀಶ್ ಪಟ್ಬಾಲ್ ರವರ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾನೆ.

ಗಂಭೀರ ಗಾಯಗೊಂಡಿದ್ದ ಜಗದೀಶ್ ಪಟ್ಬಾಲ್ ಮೃತಪಟ್ಟಿದ್ದು, ಅವರ ಪತ್ನಿ ಆಶಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!